Telegram Join My Telegram WhatsApp Join My WhatsApp

Senior Citizen Card : 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಸಿಗುವ 10 ಪ್ರಮುಖ ಸೌಲಭ್ಯಗಳು – ಅರ್ಜಿ ವಿಧಾನ ಇಲ್ಲಿದೆ

Senior Citizen Card 2026: 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಸಿಗುವ ಪ್ರಮುಖ ಸೌಲಭ್ಯಗಳು

ಭಾರತದಲ್ಲಿ ಹಿರಿಯ ನಾಗರಿಕರ ಜೀವನವನ್ನು ಸುಲಭಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಪ್ರಮುಖವಾದುದು ಹಿರಿಯ ನಾಗರಿಕ ಕಾರ್ಡ್ (Senior Citizen Card) ಆಗಿದೆ.

ಇದು 60 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಸರ್ಕಾರ ನೀಡುವ ಈ ಕಾರ್ಡ್ ಮೂಲಕ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳಲ್ಲಿ ಹಲವಾರು ರಿಯಾಯಿತಿಗಳು ಹಾಗೂ ವಿಶೇಷ ಸೌಲಭ್ಯಗಳು ದೊರೆಯುತ್ತವೆ.

ಪ್ರಯಾಣ, ಆರೋಗ್ಯ, ಬ್ಯಾಂಕಿಂಗ್, ತೆರಿಗೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ಕಾರ್ಡ್ ಬಳಸಿ ಪ್ರಯೋಜನ ಪಡೆಯಬಹುದು.
ಹೀಗಾಗಿ ಇಲ್ಲಿ,

ಹಿರಿಯ ನಾಗರಿಕ ಕಾರ್ಡ್ ಎಂದರೇನು ?,

ಈ ಕಾರ್ಡ್ ಗೆ ಯಾವ ಸೌಲಭ್ಯಗಳು ಸಿಗುತ್ತವೆ ?,

ಈ ಕಾರ್ಡ್ ಪಡೆಯಲು ಅರ್ಜಿ ಹೇಗೆ ಸಲ್ಲಿಸಬೇಕು ?

ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹಿರಿಯ ನಾಗರಿಕ ಕಾರ್ಡ್ ಎಂದರೇನು?
ಹಿರಿಯ ನಾಗರಿಕ ಕಾರ್ಡ್ ಎಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಸರ್ಕಾರ ನೀಡುವ ಗುರುತಿನ ಕಾರ್ಡ್ ಆಗಿದೆ.

ಈ ಕಾರ್ಡ್ ಮೂಲಕ ಹಿರಿಯ ನಾಗರಿಕರಿಗೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೌಲಭ್ಯಗಳು ದೊರೆಯುತ್ತವೆ.

ಈ ಕಾರ್ಡ್ ಅನ್ನು ರಾಜ್ಯ ಸರ್ಕಾರ ಅಥವಾ ಜಿಲ್ಲಾ ಆಡಳಿತದಿಂದ ನೀಡಲಾಗುತ್ತದೆ. ಇದು ಹಿರಿಯ ನಾಗರಿಕರ ಗುರುತಿನ ದಾಖಲೆ ಆಗಿಯೂ ಬಳಸಬಹುದು.

ಹಿರಿಯ ನಾಗರಿಕ ಕಾರ್ಡ್ ಹೊಂದಿದವರಿಗೆ ಸಿಗುವ ಪ್ರಮುಖ ಸೌಲಭ್ಯಗಳು ಯಾವುವು ?

ಹಿರಿಯ ನಾಗರಿಕ ಕಾರ್ಡ್ ಪಡೆದವರಿಗೆ ಹಲವಾರು ಸೌಲಭ್ಯಗಳು ಲಭ್ಯವಿವೆ. ಅವುಗಳಲ್ಲಿ ಕೆಲವು ಪ್ರಮುಖ ವಾದವುಗಳು ಕೆಳಗಿನಂತಿವೆ.

1. KSRTC ಬಸ್ ಪ್ರಯಾಣದಲ್ಲಿ ಶೇಕಡ 25% ರಷ್ಟು ರಿಯಾಯಿತಿ ಇರುತ್ತದೆ 
ಹಿರಿಯ ನಾಗರಿಕರಿಗೆ KSRTC ಬಸ್ ಪ್ರಯಾಣದಲ್ಲಿ ಸುಮಾರು ಶೇಕಡ 25% ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಈ ಸೌಲಭ್ಯದಿಂದ ರಾಜ್ಯದ ಒಳಗೆ ಪ್ರಯಾಣ ಮಾಡುವಾಗ ಹಿರಿಯ ನಾಗರಿಕರಿಗೆ ಪ್ರಯಾಣ ವೆಚ್ಚ ಕಡಿಮೆಯಾಗುತ್ತದೆ. ಮಧ್ಯಮ ವರ್ಗದವರಿಗೆ ತುಂಬಾ ಅನುಕೂಲವಾಗಿರುತ್ತದೆ.

2. ರೈಲು ಪ್ರಯಾಣದಲ್ಲಿ ವಿಶೇಷ ರಿಯಾಯಿತಿ ಇರುತ್ತದೆ 
ಭಾರತೀಯ ರೈಲ್ವೇ ಇಲಾಖೆ ಕೂಡ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ.
ಕೆಲವು ರೈಲು ಸೇವೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸೀಟ್ ಮತ್ತು ಟಿಕೆಟ್ ರಿಯಾಯಿತಿ ನೀಡಲಾಗುತ್ತದೆ.

3. ಆರೋಗ್ಯ ಚಿಕಿತ್ಸೆಯಲ್ಲಿ ರಿಯಾಯಿತಿ
ಹಿರಿಯ ನಾಗರಿಕರಿಗೆ ಹಲವಾರು ಸರ್ಕಾರಿ ಆಸ್ಪತ್ರೆಗಳು ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.
ಕೆಲವು ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಾಥಮಿಕತೆಯ ಸೌಲಭ್ಯ ನೀಡಲಾಗುತ್ತದೆ.

4. ಬ್ಯಾಂಕ್ ಠೇವಣಿಗಳ ಮೇಲೆ ಹೆಚ್ಚು ಬಡ್ಡಿ ನೀಡಲಾಗುವುದು.
ಹಿರಿಯ ನಾಗರಿಕರಿಗೆ ಬ್ಯಾಂಕುಗಳಲ್ಲಿ Fixed Deposit (FD) ಅಥವಾ ಇತರ ಠೇವಣಿ ಇಟ್ಟರೆ ಅದರ ಮೇಲೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚು ಬಡ್ಡಿದರ ನೀಡಲಾಗುತ್ತದೆ. ಇದು ಅವರ ಉಳಿತಾಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಇದರಿಂದ ನಿವೃತ್ತಿಯ ನಂತರ ಆದಾಯ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.

5. ತೆರಿಗೆಯಲ್ಲಿ ರಿಯಾಯಿತಿ ಸಿಗುತ್ತದೆ 
ಹಿರಿಯ ನಾಗರಿಕರಿಗೆ ಆದಾಯ ತೆರಿಗೆಯಲ್ಲಿ ಕೆಲವು ರಿಯಾಯಿತಿಗಳು ನೀಡಲಾಗುತ್ತವೆ.
ಹೆಚ್ಚಿನ ಆದಾಯ ಮಿತಿಯವರೆಗೆ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಲಾಗುತ್ತದೆ.

6. ಸರ್ಕಾರಿ ಕಚೇರಿಗಳಲ್ಲಿ ಆದ್ಯತೆ ಇರುತ್ತದೆ 
ಹಿರಿಯ ನಾಗರಿಕರಿಗೆ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ ಅಥವಾ ಆದ್ಯತೆ ಸೇವೆ ನೀಡಲಾಗುತ್ತದೆ.
ಇದರಿಂದ ಹೆಚ್ಚು ಸಮಯ ಕಾಯಬೇಕಾಗಿ ಇರುವುದಿಲ್ಲ. ಇದರಿಂದ ಅವರಿಗೆ ದಣಿವು ಕಡಿಮೆಯಾಗುತ್ತದೆ.

7. ವಿಶೇಷ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಅವಕಾಶ 
ಹಿರಿಯ ನಾಗರಿಕರಿಗೆ ಸರ್ಕಾರ ಹಲವು ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುತ್ತದೆ.
ಉದಾಹರಣೆಗೆ ಗಮನಿಸುವುದಾದರೆ:

ವೃದ್ಧಾಪ್ಯ ಪಿಂಚಣಿ ಯೋಜನೆ ಕಾರ್ಯಕ್ರಮ

ಆರೋಗ್ಯ ವಿಮೆ ಯೋಜನೆ ಕಾರ್ಯಕ್ರಮ

ಈ ಯೋಜನೆಗಳ ಮೂಲಕ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಸಿಗುತ್ತದೆ.

8. ಅಂಗವಿಕಲ ಹಿರಿಯ ನಾಗರಿಕರಿಗೆ ಹೆಚ್ಚುವರಿ ಸೌಲಭ್ಯ
ಅಂಗವಿಕಲ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಹೆಚ್ಚುವರಿ ಸೌಲಭ್ಯಗಳು ಮತ್ತು ಸಹಾಯಧನ ನೀಡಲಾಗುತ್ತದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದನ್ನು ತಿಳಿದಿರಬೇಕು.

9. ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಕಾರ್ಯಕ್ರಮ 
ಕೆಲವು ಹಿರಿಯ ನಾಗರಿಕರು Ayushman Bharat ಯೋಜನೆಯ ಮೂಲಕ ಉಚಿತ ಆರೋಗ್ಯ ಸೇವೆ ಪಡೆಯಬಹುದು.
ಈ ಯೋಜನೆಯಡಿ ಲಕ್ಷಾಂತರ ರೂಪಾಯಿ ವರೆಗೆ ಚಿಕಿತ್ಸೆ ಸೌಲಭ್ಯ ಉಚಿತವಾಗಿ ದೊರೆಯುತ್ತದೆ.

10. ನ್ಯಾಯಾಲಯ ಪ್ರಕ್ರಿಯೆಗಳಲ್ಲಿ ಆದ್ಯತೆ
ಕೆಲವು ಸಂದರ್ಭಗಳಲ್ಲಿ ಹಿರಿಯ ನಾಗರಿಕರ ಪ್ರಕರಣಗಳಿಗೆ ನ್ಯಾಯಾಲಯಗಳಲ್ಲಿ ಆದ್ಯತೆ ನೀಡಲಾಗುತ್ತದೆ.
ಇದರಿಂದ ಅವರ ಸಮಸ್ಯೆಗಳು ಬೇಗ ಪರಿಹಾರವಾಗಲು ಸಹಾಯವಾಗುತ್ತದೆ. ಕಾನೂನಿನ ಸೌಲಭ್ಯವೂ ಕೂಡ ಇದರಿಂದ ಸಿಗುತ್ತದೆ.

ಹಿರಿಯ ನಾಗರಿಕ ಕಾರ್ಡ್ ಪಡೆಯಲು ಬೇಕಾಗುವ ಅರ್ಹತೆ ಮತ್ತು ಮಾನದಂಡವೇನು?
ಹಿರಿಯ ನಾಗರಿಕ ಕಾರ್ಡ್ ಪಡೆಯಲು ಕೆಲವು ಪ್ರಮುಖ ಅರ್ಹತೆಗಳನ್ನು ಸರ್ಕಾರ ನಿಗದಿಪಡಿಸಿದೆ.
ಅವುಗಳು:

ಅರ್ಜಿದಾರರ ವಯಸ್ಸು 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಬೇಕು

ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು

ಸರಿಯಾದ ಗುರುತಿನ ದಾಖಲೆ ಹೊಂದಿರಬೇಕು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು ?
ಹಿರಿಯ ನಾಗರಿಕ ಕಾರ್ಡ್ ಪಡೆಯಲು ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ.

ಆಧಾರ್ ಕಾರ್ಡ್

ವಯಸ್ಸಿನ ಪ್ರಮಾಣ ಪತ್ರ

ವಿಳಾಸದ ಪ್ರಮಾಣ ಪತ್ರ

ಪಾಸ್‌ಪೋರ್ಟ್ ಸೈಜ್ ಫೋಟೋ

ಮೊಬೈಲ್ ನಂಬರ್ ( ಚಾಲ್ತಿಯಲ್ಲಿ ಇರುವಂತಹದು )

ಹಿರಿಯ ನಾಗರಿಕ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಇರುತ್ತದೆ 
ಹಿರಿಯ ನಾಗರಿಕ ಕಾರ್ಡ್ ಪಡೆಯಲು ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು.

1. ಆನ್‌ಲೈನ್ ಮೂಲಕ
ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
Senior Citizen Card ಅರ್ಜಿ ಫಾರ್ಮ್ ತೆರೆಯಿರಿ
ಅಗತ್ಯ ಮಾಹಿತಿಯನ್ನು ನಮೂದಿಸಿ
ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಅರ್ಜಿಯನ್ನು ಸಲ್ಲಿಸಿ ಇದು ಒಂದು ಆಯ್ಕೆಯಾದರೆ, ಮತ್ತೊಂದು

2. ಆಫ್‌ಲೈನ್ ಮೂಲಕ
ಸಮೀಪದ ತಹಶೀಲ್ದಾರ್ ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ
ನಿಗದಿತ ಅರ್ಜಿ ಫಾರ್ಮ್ ಪಡೆದು ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಲಗ್ತೀಕರಿಸಿ, ಅರ್ಜಿ ಸಲ್ಲಿಸುವುದು.

ಹಿರಿಯ ನಾಗರಿಕ ಕಾರ್ಡ್ ಯಾಕೆ ಮುಖ್ಯ? ಬನ್ನಿ ತಿಳಿದುಕೊಳ್ಳೋಣ !

ಹಿರಿಯ ನಾಗರಿಕ ಕಾರ್ಡ್ ಕೇವಲ ಗುರುತಿನ ಕಾರ್ಡ್ ಮಾತ್ರವಲ್ಲ.
ಇದು ಹಿರಿಯ ನಾಗರಿಕರಿಗೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಸಹಾಯ ಮಾಡುತ್ತದೆ.
ಪ್ರಯಾಣ, ಆರೋಗ್ಯ, ಬ್ಯಾಂಕಿಂಗ್ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ಕಾರ್ಡ್ ಬಹಳ ಉಪಯುಕ್ತವಾಗಿದೆ.

ಕೊನೆಯದಾಗಿ ಒಂದು ಮಾತು
ಸರ್ಕಾರ ಹಿರಿಯ ನಾಗರಿಕರ ಜೀವನವನ್ನು ಸುಲಭಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಅದರಲ್ಲಿಯೇ ಪ್ರಮುಖವಾದುದು ಹಿರಿಯ ನಾಗರಿಕ ಕಾರ್ಡ್.

ಈ ಕಾರ್ಡ್ ಮೂಲಕ 60 ವರ್ಷ ಮೇಲ್ಪಟ್ಟವರು ಹಲವಾರು ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು.
ಆದ್ದರಿಂದ ನಿಮ್ಮ ಕುಟುಂಬದಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದರೆ, ಈ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಇಂತಹ ಮಹತ್ವದ ಅಪ್ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ! Jobfykannada.in ಫಾಲೋ ಮಾಡಿ ಮತ್ತು ಪ್ರತಿದಿನ ಹೊಸ ಸುದ್ದಿಗಳನ್ನು ಪಡೆಯಿರಿ.

Leave a Comment