PAN CARD ಕಳೆದು ಹೋದರೆ ಏನು ಮಾಡಬೇಕು? ಸಂಪೂರ್ಣ ಗೈಡ್ ಇಲ್ಲಿದೆ !
ಪಾನ್ ಕಾರ್ಡ್ (PAN Card) ನಮ್ಮ ಜೀವನದಲ್ಲಿ ತುಂಬಾ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್, Income Tax, loan, investment ಎಲ್ಲಕ್ಕೂ ಇದು ಅಗತ್ಯ. ಆದರೆ ಅನೇಕ ಬಾರಿ ನಾವು ಇದ ನ್ನು ಕಳೆದುಕೊಳ್ಳುತ್ತೇವೆ ಅಥವಾ PAN Number ಮರೆತು ಹೋಗುತ್ತೇವೆ. ಇನ್ನು ಮುಂದೆ ಅದಕ್ಕೆ ಚಿಂತಿಸಬೇಕಾಗಿಲ್ಲ — ಇನ್ನು ಪಾನ್ ಕಾರ್ಡ್ ಕಳೆದುಹೋದರೆ ನೀವು ಸುಲಭವಾಗಿ ಮತ್ತೆ ಪಡೆಯಬಹುದು.
ಹೇಗೆ ಅಂತ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ!
ಪಾನ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು, PAN Number ಹೇಗೆ ಹುಡುಕುವುದು, Duplicate PAN card ಹೇಗೆ ಪಡೆಯುವುದು, e-PAN download ಮಾಡುವುದು — ಎಲ್ಲವನ್ನು step-by-step ವಿವರಿಸಿದ್ದೇವೆ.
🔹 ಪಾನ್ ಕಾರ್ಡ್ ಕಳೆದು ಹೋದರೆ ಮೊದಲಿಗೆ ಏನು ಮಾಡಬೇಕು?
ಪಾನ್ ಕಾರ್ಡ್ ಕಳೆದು ಹೋದಾಗ ಗಾಬರಿಯಾಗಬೇಡಿ. ಮೊದಲಿಗೆ ಈ 3 ಮುಖ್ಯ ವಿಷಯಗಳನ್ನು ಗಮನಿಸಿ:
1. PAN Number ನೆನಪಿಟ್ಟುಕೊಳ್ಳಿ 😊
ನಿಮ್ಮ PAN Number ಗೊತ್ತಿದ್ದರೆ ಎಲ್ಲಾ ಪ್ರಕ್ರಿಯೆಗಳು ತುಂಬಾ ಸುಲಭವಾಗುತ್ತವೆ. ಇದು ನಿಮ್ಮ unique ID ಆಗಿದೆ.
👉 PAN Number ಗೊತ್ತಿಲ್ಲದಿದ್ದರೆ ಕೆಳಗಿನ ವಿಧಾನಗಳಿಂದ ಹುಡುಕಬಹುದು ( ಮುಂದೆ ವಿವರಿಸಲಾಗಿದೆ ಪೂರ್ತಿ ಓದಿರಿ ).
2. FIR ಕೊಡಬೇಕಾ ? 🤔
ಸಾಮಾನ್ಯವಾಗಿ FIR ಕಡ್ಡಾಯವಿಲ್ಲ. ಆದರೆ ನಿಮ್ಮ PAN misuse ಆಗಬಹುದು ಅನ್ನಿಸಿದರೆ:
- ಹತ್ತಿರದ ಪೊಲೀಸ್ ಠಾಣೆಗೆ ಹೋಗಿ FIR ಕೊಡಬಹುದು
- ಇದು ನಿಮ್ಮ ಸುರಕ್ಷತೆಗಾಗಿ ಒಳ್ಳೆಯದು
3. Duplicate PAN ಮಾತ್ರ apply ಮಾಡಿ
⚠️ ಹೊಸ PAN ಗೆ apply ಮಾಡಬೇಡಿ ಒಬ್ಬ ವ್ಯಕ್ತಿಗೆ ಒಂದೇ PAN ಮಾತ್ರ ಇರಬೇಕು. ಎರಡು PAN ಇದ್ದರೆ penalty ಬರುತ್ತದೆ.
🔹 Duplicate PAN Card ಪಡೆಯುವ ವಿಧಾನ
🟢 Online ಮೂಲಕ ಅರ್ಜಿ ಸಲ್ಲಿಸಿ ಇದು ಅತ್ಯಂತ ಸುಲಭ ವಿಧಾನ
ಇದು ಹೆಚ್ಚು ಜನ ಬಳಸುವ ವಿಧಾನ. ಮನೆಯಲ್ಲೇ ಕುಳಿತು 5 ನಿಮಿಷದಲ್ಲಿ apply ಮಾಡಬಹುದು.
Steps:
- NSDL ಅಥವಾ UTIITSL official website ಗೆ ಹೋಗಿ
- “Reprint of PAN Card” ಆಯ್ಕೆ ಮಾಡಿ
- ನಿಮ್ಮ PAN Number, Aadhaar Number, Date of Birth ನಮೂದಿಸಿ
- OTP ಮೂಲಕ verify ಮಾಡಿ
- ನಿಮ್ಮ address confirm ಮಾಡಿ
- ₹ 50 – ₹ 100 ಶುಲ್ಕವನ್ನು online ನಲ್ಲಿ pay ಮಾಡಿ
- Submit ಮಾಡಿ
📦 10 – 15 ದಿನಗಳಲ್ಲಿ ನಿಮ್ಮ ಮನೆಗೆ PAN card Indian Post ನಲ್ಲಿ ಬರುತ್ತದೆ
🔵 Offline ಮೂಲಕ ಕೂಡ ಅರ್ಜಿ ಸಲ್ಲಿಸಿ
Online ನಲ್ಲಿ ಅರ್ಜಿ ಸಲ್ಲಿಸಲು ಗೊತ್ತಿಲ್ಲದವರಿಗೆ ಇದು ಉತ್ತಮ ಆಯ್ಕೆ.
Steps:
- ಹತ್ತಿರದ PAN service center ಗೆ ಭೇಟಿ ಮಾಡಿ
- PAN correction / reprint form ಭರ್ತಿ ಮಾಡಿ
- ಸರಿಯಾದ ID proof ಮತ್ತು address proof ಸಲ್ಲಿಸಿ
- ಅರ್ಜಿಯಲ್ಲಿ ನಮೂದಿಸಿದ ಶುಲ್ಕ ಪಾವತಿಸಿ
🔹 ಬೇಕಾಗುವ ದಾಖಲೆಗಳು
Duplicate PAN card ಪಡೆಯಲು ಕೆಳಗಿನ ದಾಖಲೆಗಳು ಬೇಕಾಗುತ್ತದೆ:
- Aadhaar Card
- Voter ID / Driving License
- Address Proof (Electricity Bill, Aadhaar etc.)
🔹 e-PAN Download ಹೇಗೆ ?
Physical card ಬೇಕಾಗಿಲ್ಲ ಅಂದರೆ e-PAN ಸಾಕು. ಇದು PDF format ನಲ್ಲಿ ಬರುತ್ತದೆ.
Steps:
- Income Tax e-filing website ಗೆ ಹೋಗಿ
- “Instant e-PAN” option select ಮಾಡಿ
- Aadhaar Number enter ಮಾಡಿ
- OTP verify ಮಾಡಿ
- Download e-PAN ( PDF ) ಮೇಲೆ click ಮಾಡಿ
🔐 PDF Password:
👉 ನಿಮ್ಮ DOB (DDMMYYYY format)
📌 Example: DOB: 15 Aug 1998 Password: 15081998
🔹 PAN Number ಮರೆತು ಹೋದರೆ ಹೇಗೆ ಹುಡುಕುವುದು?
PAN Number ಮರೆತು ಹೋದರೂ ಕೂಡ ನೀವು ಸುಲಭವಾಗಿ ಮತ್ತೆ ಪಡೆಯಬಹುದು.
🟢 1. Income Tax Website ಮೂಲಕ ಸುಲಭವಾಗಿ ಮತ್ತೆ ಪಡೆಯಬಹುದು ( ಇದು Best Method ಆಗಿದೆ )
Steps:
- Income Tax e-filing portal open ಮಾಡಿ
- “Instant e-PAN” select ಮಾಡಿ
- “Check Status / Download PAN” click ಮಾಡಿ
- Aadhaar Number enter ಮಾಡಿ
- OTP verify ಮಾಡಿ
👉 ನಿಮ್ಮ PAN Number screen ಮೇಲೆ ತೋರಿಸುತ್ತದೆ
🔵 2. NSDL Website ಮೂಲಕವೂ ಕೂಡ ಪತ್ತೆ ಮಾಡಬಹುದು
Steps:
- NSDL PAN site ಗೆ ಹೋಗಿ
- “Know Your PAN” option select ಮಾಡಿ
- Full Name, Date of Birth, Mobile Number ನಮೂದಿಸಿ
- OTP verify ಮಾಡಿ
👉 ನಿಮ್ಮ PAN Number ದೊರೆಯುತ್ತದೆ
🟡 3. ಹಳೆಯ ದಾಖಲೆಗಳನ್ನು ಪರಿಶೀಲಿಸಿ
ಈ ದಾಖಲೆಗಳಲ್ಲಿ PAN Number ಇರಬಹುದು:
- Income Tax Return (ITR) ಮಾಡಿದ್ದಲ್ಲಿ
- Bank Account details ನಲ್ಲಿ ( Account Open ಸಂಧರ್ಭ )
- ನೀವು ನೀಡಿದ Email inbox ನಲ್ಲಿ
- Salary slip / Form 16 ನಲ್ಲಿ ಪರಿಶೀಲಿಸಿ
🔴 4. Helpline ಮೂಲಕ ಪರಿಶೀಲಿಸಿ
📞 Income Tax Helpline: 1800 180 1961
ನಿಮ್ಮ details ನೀಡಿ PAN Number ತಿಳಿದುಕೊಳ್ಳಬಹುದು
🔹 Mobile ನಲ್ಲಿ PAN Number ಹುಡುಕುವುದು ಹೇಗೆ ? ( Step-by-Step ವಿವರ ಇಲ್ಲಿದೆ )
ಇದು ಅತ್ಯಂತ ಸುಲಭ ವಿಧಾನ. ನಿಮ್ಮ mobile ಬಳಸಿ 2 ನಿಮಿಷದಲ್ಲಿ ಮಾಡಬಹುದು.
🟢 Aadhaar ಮೂಲಕ
Steps:
- Google ನಲ್ಲಿ “Income Tax e-filing portal” search ಮಾಡಿ
- Official website open ಮಾಡಿ
- “Instant e-PAN” select ಮಾಡಿ
- “Check Status / Download PAN” click ಮಾಡಿ
- Aadhaar Number enter ಮಾಡಿ
- OTP verify ಮಾಡಿ
✅ PAN Number screen ಮೇಲೆ ಬರುತ್ತದೆ
📥 e-PAN Download ಮಾಡುವುದು (Mobile ನಲ್ಲಿ)
Aadhaar verify ಆದ ನಂತರ:
- Download e-PAN option ಬರುತ್ತದೆ
- Click ಮಾಡಿ PDF download ಮಾಡಿ
🔹 PAN Card Re-print ( Physical Card )
Physical card ಬೇಕಾದರೆ:
- NSDL site open ಮಾಡಿ
- Re-print PAN Card option select ಮಾಡಿ
- PAN Number + Aadhaar fill ಮಾಡಿ
- ₹ 50–₹ 100 fee pay ಮಾಡಿ ಅಥವಾ ನಿಗದಿ ಪಡಿಸಿದ ಮೊತ್ತ ಪಾವತಿಸಿ
📦 10–15 ದಿನಗಳಲ್ಲಿ card ಮನೆಗೆ ಬರುತ್ತದೆ
⚠️ ಮುಖ್ಯ ಸೂಚನೆಗಳು
- PAN Number ಬದಲಾಗುವುದಿಲ್ಲ
- ಹೊಸ PAN apply ಮಾಡಬೇಡಿ
- Duplicate ಮಾತ್ರ request ಮಾಡಿ
- Aadhaar link ಇದ್ದರೆ process ವೇಗವಾಗಿ ಆಗುತ್ತದೆ
💡 Quick Tips
- PAN Number ಸಿಕ್ಕ ನಂತರ ಅದನ್ನು save ಮಾಡಿ ಇಟ್ಟುಕೊಳ್ಳಿ ಅಥವಾ
- Screenshot ತೆಗೆದುಕೊಳ್ಳಿ
- Google Drive / WhatsApp ನಲ್ಲಿ store ಮಾಡಿ
- e-PAN copy ಅನ್ನು backup ನಲ್ಲಿ ಇಡಿ.
🔥 Conclusion
ಪಾನ್ ಕಾರ್ಡ್ ಕಳೆದು ಹೋದರೆ ಚಿಂತಿಸಬೇಕಾಗಿಲ್ಲ. ಸರಿಯಾದ ವಿಧಾನ ಗೊತ್ತಿದ್ದರೆ ನೀವು 2 ನಿಮಿಷದಲ್ಲಿ PAN Number ಹುಡುಕಬಹುದು ಮತ್ತು 10 ದಿನಗಳಲ್ಲಿ duplicate card ಪಡೆಯಬಹುದು.
ಇಂದೇ ನಿಮ್ಮ PAN details check ಮಾಡಿ safe ಆಗಿ save ಮಾಡಿಕೊಂಡು future problems ತಪ್ಪಿಸಿ.
ಇಂತಹ ಮಹತ್ವದ ಅಪ್ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಕೂಡಲೇ jobfykannada.in ಪೇಜ್ ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿ ದಿನ ಹೊಸ ಸುದ್ದಿಗಳನ್ನು ಪಡೆಯಿರಿ.