KSP Recruitment 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 8176 ಹುದ್ದೆಗಳ ಭರ್ತಿ – ಅರ್ಜಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭ !
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಸುದ್ದಿ ಇದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) ಶೀಘ್ರದಲ್ಲೇ 8176 Police Constable ಹಾಗೂ Sub-Inspector ಹುದ್ದೆಗಳ ಭರ್ತಿ ಮಾಡಲು ಯೋಜನೆ ರೂಪಿಸಿದೆ. ಈ ನೇಮಕಾತಿ ಕುರಿತಾಗಿ ಈಗಾಗಲೇ ಒಂದು upcoming notification ಬಿಡುಗಡೆಯಾಗಿದ್ದು, ಅಧಿಕೃತ ಅಧಿಸೂಚನೆ ಕೂಡ ಬೇಗ ಪ್ರಕಟವಾಗುವ ನಿರೀಕ್ಷೆಯಿದೆ.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಯುವಕರಿಗೆ ಇದು ದೊಡ್ಡ ಅವಕಾಶವಾಗಿದೆ. ವಿಶೇಷವಾಗಿ 10 ನೇ ತರಗತಿ, 12 ನೇ ತರಗತಿ ಹಾಗೂ ಪದವಿ ಪಾಸ್ ಮಾಡಿದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಸಾವಿರಾರು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಅದರ ಭಾಗವಾಗಿ ಪೊಲೀಸ್ ಇಲಾಖೆಯಲ್ಲೂ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಯಲಿದೆ. ಆದ್ದರಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.
ಈ ಲೇಖನದಲ್ಲಿ KSP Recruitment 2026 ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ– ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಬಗ್ಗೆ ತಿಳಿದುಕೊಳ್ಳೋಣ.
KSP Recruitment 2026 – ಪ್ರಮುಖ ಮಾಹಿತಿ ತಿಳಿಯಿರಿ
ಸಂಸ್ಥೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP)
ಒಟ್ಟು ಹುದ್ದೆಗಳು: 8176
ಹುದ್ದೆಗಳ ಹೆಸರು: Police Constable, Sub-Inspector
ಉದ್ಯೋಗ ಸ್ಥಳ: ಕರ್ನಾಟಕ
ವೇತನ: ಕರ್ನಾಟಕ ಪೊಲೀಸ್ ಇಲಾಖೆಯ ನಿಯಮಾನುಸಾರ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣಾ ಅವಕಾಶವಾಗಿದೆ. ಈ ನೇಮಕಾತಿ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಹುದ್ದೆಗಳ ವಿವರ (Post Wise Vacancy Details) ದ ಬಗ್ಗೆ
ಈ ನೇಮಕಾತಿಯಲ್ಲಿ ವಿವಿಧ ಪೊಲೀಸ್ ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು Kalyana Karnataka (KK) ಮತ್ತು Non-Kalyana Karnataka (NKK) ಪ್ರದೇಶಗಳ ಪ್ರಕಾರ ಹಂಚಿಕೆ ಮಾಡಲಾಗಿದೆ.
Deductive Sub-Inspector (DSI)
- Kalyana Karnataka – 5 ಹುದ್ದೆಗಳು
- Non-Kalyana Karnataka – 15 ಹುದ್ದೆಗಳು
Armed Police Constable (APC)
- Kalyana Karnataka – 275 ಹುದ್ದೆಗಳು
- Non-Kalyana Karnataka – 1375 ಹುದ್ದೆಗಳು
Civil Police Constable
- Kalyana Karnataka – 610 ಹುದ್ದೆಗಳು
- Non-Kalyana Karnataka – 3500 ಹುದ್ದೆಗಳು
Special Reserve Police Constable (KSRP)
- Kalyana Karnataka – 532 ಹುದ್ದೆಗಳು
- Non-Kalyana Karnataka – 1500 ಹುದ್ದೆಗಳು
KSISF Police Constable
- Kalyana Karnataka – 364 ಹುದ್ದೆಗಳು
- Non-Kalyana Karnataka – 0
ಒಟ್ಟಾರೆ ನೋಡಿದರೆ,
Kalyana Karnataka ಪ್ರದೇಶದಲ್ಲಿ: 1786 ಹುದ್ದೆಗಳು
Non-Kalyana Karnataka ಪ್ರದೇಶದಲ್ಲಿ: 6390 ಹುದ್ದೆಗಳು
ಈ ನೇಮಕಾತಿಯ ಮೂಲಕ ರಾಜ್ಯದಾದ್ಯಂತ ಸಾವಿರಾರು ಯುವಕರಿಗೆ ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಇದೆ.
ವಿದ್ಯಾರ್ಹತೆ (Educational Qualification) ಗಮನಿಸಿದರೆ
KSP Recruitment 2026 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ಅಗತ್ಯ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಅಭ್ಯರ್ಥಿಗಳು ಕೆಳಗಿನ ಯಾವುದಾದರೂ ವಿದ್ಯಾರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು:
- 10 ನೇ ತರಗತಿ ಪಾಸ್ ಆಗಿರಬೇಕು
- 12 ನೇ ತರಗತಿ ಪಾಸ್ ಆಗಿರಬೇಕು
- ಪದವಿ (Degree)
- BCom
- BSc
- BE / BTech
- ಯಾವುದೇ Post Graduation
ಹುದ್ದೆಯ ಪ್ರಕಾರ ವಿದ್ಯಾರ್ಹತೆ ಸ್ವಲ್ಪ ಬದಲಾಗಬಹುದು. ಆದ್ದರಿಂದ ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ವಿವರಗಳನ್ನು ಪರಿಶೀಲಿಸುವುದು ಉತ್ತಮ.
ವಯೋಮಿತಿ (Age Limit)
KSP ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿರ್ದಿಷ್ಟ ವಯೋಮಿತಿಯೊಳಗಿರಬೇಕು.
ಕನಿಷ್ಠ ವಯಸ್ಸು: 18 ವರ್ಷ ದಿಂದ
ಗರಿಷ್ಠ ವಯಸ್ಸು: 38 ವರ್ಷದ ವರೆಗೆ
ವಯೋಮಿತಿ ಸಡಿಲಿಕೆ ನೋಡಿದರೆ
ಸರ್ಕಾರದ ನಿಯಮಾನುಸಾರ ಕೆಲವು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
OBC / 2A / 2B / 3A / 3B ಅಭ್ಯರ್ಥಿಗಳು: 3 ವರ್ಷದ ವರೆಗೆ
SC / ST ಅಭ್ಯರ್ಥಿಗಳು: 5 ವರ್ಷದ ವರೆಗೆ
PWD ಅಭ್ಯರ್ಥಿಗಳು: 10 ವರ್ಷದ ವರೆಗೆ
ಅರ್ಜಿ ಶುಲ್ಕ (Application Fee)
ಈ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಶುಲ್ಕದ ವಿವರಗಳು ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ತಿಳಿಸಲಾಗುತ್ತದೆ. ಸಾಮಾನ್ಯವಾಗಿ ವರ್ಗಗಳ ಪ್ರಕಾರ ಅರ್ಜಿ ಶುಲ್ಕ ನಿಗದಿಯಾಗಿರುತ್ತದೆ.
ಆದ್ದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಪರಿಶೀಲಿಸಬೇಕು.
ಆಯ್ಕೆ ಪ್ರಕ್ರಿಯೆ (Selection Process) ಹೇಗಿರುತ್ತದೆ ?
ಕರ್ನಾಟಕ ಪೊಲೀಸ್ ನೇಮಕಾತಿಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹಲವು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
1. Written Examination
ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಲೇಖಿತ ಪರೀಕ್ಷೆ ನಡೆಯುತ್ತದೆ. ಈ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಗಣಿತ ಹಾಗೂ reasoning ಸಂಬಂಧಿತ ಪ್ರಶ್ನೆಗಳು ಕೇಳಲಾಗುತ್ತದೆ.
2. Endurance Test
ಲೇಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಶಾರೀರಿಕ ಸಾಮರ್ಥ್ಯ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಓಟ ಮತ್ತು ಇತರ ಶಾರೀರಿಕ ಚಟುವಟಿಕೆಗಳ ಪರೀಕ್ಷೆ ನಡೆಸಲಾಗುತ್ತದೆ.
3. Physical Standard Test (PST)
ಈ ಹಂತದಲ್ಲಿ ಅಭ್ಯರ್ಥಿಗಳ ಎತ್ತರ, ತೂಕ ಮತ್ತು ಇತರ ದೇಹದ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ.
4. Interview
ಕೆಲವು ಹುದ್ದೆಗಳಿಗೆ ಅಂತಿಮ ಹಂತದಲ್ಲಿ ಸಂದರ್ಶನ ನಡೆಯಬಹುದು.
ಈ ಎಲ್ಲಾ ಹಂತಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ ಅಭ್ಯರ್ಥಿಗಳಿಗೆ ಅಂತಿಮವಾಗಿ ನೇಮಕಾತಿ ನೀಡಲಾಗುತ್ತದೆ.
ಈ ಬಾರಿ ಕರ್ನಾಟಕ ಸರ್ಕಾರದ ದೊಡ್ಡ ನೇಮಕಾತಿ ಯೋಜನೆ
ಕರ್ನಾಟಕ ಸರ್ಕಾರವು ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಒಟ್ಟು 56,432 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಿದೆ. ಈ ಯೋಜನೆಯ ಭಾಗವಾಗಿ ಪೊಲೀಸ್ ಇಲಾಖೆಯಲ್ಲೂ ಸಾವಿರಾರು ಹುದ್ದೆಗಳ ನೇಮಕಾತಿ ನಡೆಯಲಿದೆ.
ಸರ್ಕಾರದ ಸೂಚನೆಯ ಪ್ರಕಾರ ಎಲ್ಲಾ ಇಲಾಖೆಗಳು 30 ದಿನಗಳೊಳಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲೂ ಬೇಗನೇ ಅಧಿಕೃತ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ.
ಕಾನೂನು ಸಂಬಂಧಿತ ವಿಷಯ
ಈ ನೇಮಕಾತಿಗೆ ಸಂಬಂಧಿಸಿದ ಕೆಲವು ವಿಷಯಗಳು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ. Scheduled Castes ಮತ್ತು Scheduled Tribes ಕಾಯ್ದೆ ಕುರಿತಾಗಿ ಕೆಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಆದರೆ ನೇಮಕಾತಿ ಪ್ರಕ್ರಿಯೆ ಹೈಕೋರ್ಟ್ ಅಂತಿಮ ತೀರ್ಪಿನ ಅಧೀನದಲ್ಲಿಯೇ ನಡೆಯಬಹುದು ಎಂದು ತಿಳಿದುಬಂದಿದೆ. ಜೊತೆಗೆ ನೇಮಕಾತಿ ಪ್ರಕ್ರಿಯೆ 2022 ರ ಮೊದಲು ಇದ್ದ ಮೀಸಲು ನಿಯಮಗಳು ಮತ್ತು roster points ಆಧಾರದ ಮೇಲೆ ನಡೆಯುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಸುವ ವಿಧಾನ (How to Apply) ನೋಡಿ
ಅಧಿಕೃತ ಅಧಿಸೂಚನೆ ಪ್ರಕಟವಾದ ನಂತರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸುವ ವಿಧಾನ:
1. ಮೊದಲು ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ತೆರೆಯಿರಿ
2. Recruitment / Career ವಿಭಾಗಕ್ಕೆ ಹೋಗಿ
3. KSP Recruitment 2026 Notification ಆಯ್ಕೆಮಾಡಿ
4. Online Application Form ತೆರೆಯಿರಿ
5. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
6. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
7. ಅರ್ಜಿ ಶುಲ್ಕ ಪಾವತಿಸಿ
8. ಅರ್ಜಿಯನ್ನು ಸಲ್ಲಿಸಿ
9. ಅರ್ಜಿಯನ್ನು ಸಲ್ಲಿಸಿದ ನಂತರ ಅದರ ಪ್ರಿಂಟ್ ಕಾಪಿ ತೆಗೆದುಕೊಂಡು ನಿಮ್ಮ ಬಳಿ ಉಳಿಸಿಕೊಂಡಿರಬೇಕು.
ಪ್ರಮುಖ ದಿನಾಂಕಗಳ ಪ್ರಕಟಣೆ
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ: ಶೀಘ್ರದಲ್ಲೇ ಪ್ರಕಟವಾಗಲಿದೆ
ಅರ್ಜಿಯ ಕೊನೆಯ ದಿನಾಂಕ: ಅಧಿಕೃತ ಅಧಿಸೂಚನೆ ನಂತರ ತಿಳಿಸಲಾಗುತ್ತದೆ
ಆದ್ದರಿಂದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು.
ಪ್ರಮುಖ ಲಿಂಕ್‌ಗಳು ನಿಮ್ಮ ಗಮನದಲ್ಲಿರಲಿ
Upcoming Notification: ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ
Apply Online: ksp-recruitment.in
Official Website: ksp-recruitment.in
ಮುಖ್ಯ ಸೂಚನೆ ತಿಳಿಯಿರಿ
ಈ ನೇಮಕಾತಿ ಕುರಿತು ಈಗಾಗಲೇ upcoming notification ಮಾತ್ರ ಪ್ರಕಟವಾಗಿದೆ. ಸಂಪೂರ್ಣ ವಿವರಗಳೊಂದಿಗೆ ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗ ಪಡೆಯಬಹುದು.
ಇಂತಹ ಮಹತ್ವದ ಅಪ್ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ! Jobfykannada.in ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿದಿನ ಹೊಸ ಸುದ್ದಿಗಳನ್ನು ಪಡೆಯಿರಿ.