🔔 ಭರ್ಜರಿ ಸುದ್ದಿ! ಧರ್ಮಸ್ಥಳ ಉಚಿತ ಸಾಮೂಹಿಕ ವಿವಾಹ 2026 – ಬಡ ಕುಟುಂಬಗಳಿಗೆ ದೇವರ ವರ 🌸
ಇಂದಿನ ದಿನಗಳಲ್ಲಿ ಮದುವೆ ಅಂದರೆ ಅನೇಕ ಕುಟುಂಬಗಳಿಗೆ ಸಂತೋಷಕ್ಕಿಂತ ಹೆಚ್ಚಾಗಿ ಆರ್ಥಿಕ ಹೊರೆ ಎನ್ನುವಂತಾಗಿದೆ. ಮದುವೆ ಖರ್ಚು, ವರದಕ್ಷಿಣೆ ಒತ್ತಡ, ಸಾಮಾಜಿಕ ಹೋರಾಟ – ಇವೆಲ್ಲವು ಸೇರಿ ಅನೇಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳನ್ನು ಸಾಲದ ಜಾಲದಲ್ಲಿ ಸಿಲುಕಿಸುತ್ತಿವೆ.
ಆದರೆ ಇಂತಹ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸಾವಿರಾರು ಕುಟುಂಬಗಳಿಗೆ ನಿಜವಾದ ಆಶಾಕಿರಣವಾಗಿದೆ. ಸರಳತೆ, ಸಂಸ್ಕಾರ ಮತ್ತು ಸೇವಾ ಮನೋಭಾವದ ಸಂಕೇತವಾಗಿರುವ ಈ ಯೋಜನೆ ದಶಕಗಳಿಂದ ಸಮಾಜದಲ್ಲಿ ಒಳ್ಳೆಯ ಬದಲಾವಣೆ ತರುತ್ತಿದೆ.
📅 54ನೇ ವರ್ಷದ ಸಾಮೂಹಿಕ ವಿವಾಹ – ಯಾವಾಗ ನಡೆಯುತ್ತದೆ ? ಎಲ್ಲಿ ನಡೆಯುತ್ತದೆ ?
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಧರ್ಮಸ್ಥಳದಲ್ಲಿ ನಡೆಯುವ ಈ ಮಹತ್ವದ ಕಾರ್ಯಕ್ರಮವು 2026 ರ ಏಪ್ರಿಲ್ 29 ರಂದು ಸಂಜೆ 6.40ಕ್ಕೆ ಗೋಧೂಳಿ ಮುಹೂರ್ತದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಆಯೋಜಿಸುತ್ತಿದೆ. ಈ ಟ್ರಸ್ಟ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.
🌿 ಈ ಯೋಜನೆ ಹಿಂದೆ ಇರುವ ಪ್ರಮುಖ ಉದ್ದೇಶದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ?
1972 ರಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮದುವೆಗಳಲ್ಲಿ ನಡೆಯುತ್ತಿದ್ದ ದುಂದುವೆಚ್ಚ, ವರದಕ್ಷಿಣೆ ಪದ್ಧತಿ ಮತ್ತು ಅತಿಯಾದ ಆರ್ಭಟವನ್ನು ತಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಿದರು, ಇದು ಪ್ರಸ್ತುತವರೆಗೂ ಚಾಲ್ತಿಯಲ್ಲಿದೆ.
ಇದು ಕೇವಲ ಉಚಿತ ಮದುವೆಯಲ್ಲ – ಇದು ಒಂದು ಸಾಮಾಜಿಕ ಚಳವಳಿ. ಕಳೆದ ಹಲವು ದಶಕಗಳಲ್ಲಿ ಸುಮಾರು 13,000 ಕ್ಕೂ ಹೆಚ್ಚು ಜೋಡಿಗಳು ಈ ವೇದಿಕೆಯಲ್ಲಿ ಸರಳವಾಗಿ ಮತ್ತು ಗೌರವಯುತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮೊದಲ ವಿವಾಹಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ ಎಂಬುದು ಸ್ಪಷ್ಟ. ಇದರಿಂದ ಯೋಜನೆಯ ಪವಿತ್ರತೆ ಮತ್ತು ನೈತಿಕ ಮೌಲ್ಯ ಮತ್ತಷ್ಟು ಗಟ್ಟಿಯಾಗುತ್ತದೆ.
🎁 ವಧು-ವರರಿಗೆ ದೊರೆಯುವ ಸೌಲಭ್ಯಗಳನ್ನು ತಿಳಿಯೋಣ ಬನ್ನಿ , ,
ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ಜೋಡಿಗಳಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅವುಗಳೆಂದರೆ
✔️ ವರನಿಗೆ ಧೋತಿ ಮತ್ತು ಶಾಲು
✔️ ವಧುವಿಗೆ ಸೀರೆ ಹಾಗೂ ರವಿಕೆ
✔️ ಮಂಗಳಸೂತ್ರ
✔️ ಹೂವಿನ ಹಾರ
✔️ ಮದುವೆಯ ಎಲ್ಲಾ ವ್ಯವಸ್ಥೆಗಳು ಇರುತ್ತದೆ
ಮದುವೆಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಟ್ರಸ್ಟ್ ಭರಿಸುತ್ತದೆ. ಇದರಿಂದ ಕುಟುಂಬಗಳು ಯಾವುದೇ ಆರ್ಥಿಕ ಒತ್ತಡವಿಲ್ಲದೆ ಸಂತೋಷದಿಂದ ಮದುವೆಯನ್ನು ನೆರವೇರಿಸಬಹುದು.
📝 ಅರ್ಜಿ ಸಲ್ಲಿಸುವ ವಿಧಾನ
ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಲು ಇಚ್ಛಿಸುವವರು 2026 ರ ಏಪ್ರಿಲ್ 25ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳು ಸರಿಯಾಗಿ ಮತ್ತು ನಿಖರವಾಗಿ ಇರಬೇಕು.
📞 ಮಾಹಿತಿಗಾಗಿ ಈ ಕೆಳಗೆ ನಮೂದಿಸಿದ ಸಂಖ್ಯೆಯನ್ನು ಸಂಪರ್ಕಿಸಿ:
08256-266644, 9663464648, 8147263422
ಅರ್ಜಿ ಸಲ್ಲಿಸುವ ಮೊದಲು ದಾಖಲೆಗಳ ಪೂರ್ಣತೆ ಪರಿಶೀಲಿಸುವುದು ಅತ್ಯಂತ ಮುಖ್ಯವಾದ ಅಂಶವಾಗಿರುತ್ತದೆ. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ದಿನಾಂಕ: 25.04.2026 ಶನಿವಾರದ ಸಂಜೆ ಒಳಗಾಗಿ ವಧೂ – ವರರ ಹೆಸರನ್ನು ದಾಖಲು ಮಾಡಿಸತಕ್ಕದ್ದು.
ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಮಾಹಿತಿಯನ್ನು ಗಮನಿಸಿ:
ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗುವವರು ಸರಕಾರದ ಆದೇಶದಂತೆ ವರನ ಪ್ರಾಯ 21
ವರ್ಷ ಹಾಗೂ ವಧುವಿನ ಪ್ರಾಯ 18 ವರ್ಷಗಳಿಗೆ ಕಡಿಮೆ ಇರಬಾರದು, ಕಡಿಮೆ ಇದ್ದಲ್ಲಿ ಅಂತಹ ವಿವಾಹಗಳಿಗೆ ಅನುಮತಿ ಇರುವುದಿಲ್ಲ ಹಾಗೂ ಕಾನೂನು ಬಾಹಿರವಾಗಿರುತ್ತದೆ
ಜನ್ಮ ದಿನಾಂಕದ ಬಗ್ಗೆ ಕಡ್ಡಾಯವಾಗಿ ಪ್ರಮಾಣಪತ್ರ ನೀಡಬೇಕು.
ವಧೂ – ವರರ ಎರಡೂ ಕಡೆಯ ತಂದೆ-ತಾಯಿಯವರ ಒಪ್ಪಿಗೆ ಇದ್ದು, ವಿವಾಹದ ದಿನ ದಂದು ಅವರ ಉಪಸ್ಥಿತಿ ಹಾಗೂ ಎರಡೂ ಕಡೆಯಿಂದ
ಸಾಕ್ಷಿದಾರರು ( ಹತ್ತಿರದ ಬಂಧುಗಳು ) ಸರಿ ಇದ್ದಲ್ಲಿ ಮಾತ್ರ ವಿವಾಹವನ್ನು ನೆರವೇರಿಸಲಾಗುವುದು.
ವಧೂ-ವರರ ಎರಡೂ ಕಡೆಯಿಂದ ಅವರ ತಂದೆ-ತಾಯಿಯವರು ನಿಧನರಾಗಿದ್ದಲ್ಲಿ, ಈಗಿನ ವಾರೀಸುದಾರರ ಸಂಪೂರ್ಣ ಒಪ್ಪಿಗೆ ಇದ್ದು ವಿವಾಹದ
ದಿನದಂದು ಅವರು ಕ್ಷೇತ್ರದಲ್ಲಿ ಹಾಜರಿರ ಬೇಕು ಹಾಗೂ ವಧೂ-ವರರ ಯಾವುದೇ ಕಡೆಯಿಂದ ರಕ್ಷಕರು ನಿಧನ ಹೊಂದಿದ ಬಗ್ಗೆ ( ಮರಣ ಪತ್ರದ
ಯಥಾ ನಕಲು ) ಪಂಚಾಯತ್‌ನಿಂದ ದೃಢೀಕರಣ ಪತ್ರವನ್ನು ನೀಡಬೇಕು.
ವಿವಾಹಕ್ಕೆ ಹೆಸರು ನೋಂದಾಯಿಸಲು ಬರುವಾಗ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾ ಕಾರ್ಯದರ್ಶಿಯವರಿಂದ ಮುದ್ರಿತ ಕಾಗದ
( ಲೆಟರ್ ಹೆಡ್ ) ದಲ್ಲಿ ವಧೂ-ವರರ ಹೆಸರು, ಪ್ರಾಯ, ವಾಸ ಸ್ಥಳದ ಸಂಪೂರ್ಣ ವಿಳಾಸ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತನೆಂಬುದಕ್ಕೆ ಅವಶ್ಯ
ದೃಢ ಪತ್ರಿಕೆಯನ್ನು ತಪ್ಪದೇ ಹಾಜರುಪಡಿಸಬೇಕು. ( ದೃಢ ಪತ್ರಿಕೆಯಲ್ಲಿ ಇತ್ತೀಚಿನ ಭಾವಚಿತ್ರ, ಮತ್ತು ಭಾವಚಿತ್ರದ ಮೇಲೆ ಪಂಚಾಯತ್ ಅಧಿಕಾರಿಗಳ ಸಹಿ, ಶೀಲು ಮತ್ತು ದಿನಾಂಕವನ್ನು ಸರಿಯಾಗಿ ನಮೂದಿಸಬೇಕು. )
ವಧೂ-ವರರ ಕುಟುಂಬದ ಮಾಹಿತಿಗಾಗಿ ಪಡಿತರ ಚೀಟಿ (ರೇಶನ್ ಕಾರ್ಡು) ಪುಸ್ತಕದ ಯಥಾ ನಕಲು / ಆಧಾರ್ ಕಾರ್ಡಿನ ನಕಲು ಹಾಜರುಪಡಿಸಬೇಕು.
* ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆ ಕಣ ಮತ್ತು ಮಂಗಲಸೂತ್ರವನ್ನು ನೀಡಲಾಗುವುದು.
ಅವರವರ ಸಂಪ್ರದಾಯಕ್ಕೆ ತಕ್ಕಂತೆ ಹೆಚ್ಚಿನ ತಯಾರಿಗಳಿದ್ದಲ್ಲಿ ವಧೂ-ವರರ ಕಡೆಯವರು ಮಾಡಿಕೊಳ್ಳಬೇಕು. ( ಪೇಟ, ಬಾಸಿಂಗ, ಟೊಪ್ಪಿ,
ಕಾಲುಂಗುರ ಇತ್ಯಾದಿ. )
ವಿವಾಹದ ಧಾರ್ಮಿಕ ವಿಧಿ-ವಿಧಾನಗಳಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಹಾರ ಸಹಿತ ಕ್ಷೇತ್ರದಿಂದಲೇ ಒದಗಿಸಲಾಗುವುದು.
ವಧೂ-ವರರ ಎರಡೂ ಕಡೆಯವರಿಗೆ ವಸತಿ ವ್ಯವಸ್ಥೆ ಮಾಡಲಾಗುವುದು.
ವಿವಾಹ ನೋಂದಣಿ ಮಾಡುವ ಸಂದರ್ಭದಲ್ಲಿ ಎಲ್ಲಾ ದಾಖಲೆಗಳನ್ನು ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು ಪರಿಶೀಲಿಸುತ್ತಾರೆ.
ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗುವವರ ಹೆಸರು ನೋಂದಾಯಿಸಿದ ವಧೂ-ವರರ ಎರಡೂ ಕಡೆಯಿಂದ ಯಾವುದೇ
ತೆರನ ಆಕ್ಷೇಪಗಳು, ದೂರುಗಳು ಬಂದಲ್ಲಿ ಅಂತಹ ವಿವಾಹವನ್ನು ಸರಕಾರದ ಸಂಬಂಧಪಟ್ಟ ಇಲಾಖೆಯವರು ವಿಮರ್ಶಿಸಿ, ನಿಯಮಗಳಿಗೆ ಸರಿಕಂಡು
ಬಾರದಿದ್ದಲ್ಲಿ ವಿವಾಹವನ್ನು ರದ್ದುಗೊಳಿಸಲಾಗುವುದು.
ವಧೂ-ವರರ ಕಡೆಯಿಂದ ಕಡ್ಡಾಯವಾಗಿ ಯಾವುದೇ ತೆರನ ವರದಕ್ಷಿಣೆಯನ್ನು ಪಡೆದುಕೊಳ್ಳಬಾರದು.
ವಿವಾಹಕ್ಕೆ ಹೆಸರು ನೋಂದಾಯಿಸಿರುವ ವಧೂ-ವರರ ಕಡೆಯವರು ದೂರದ ಊರಿನಿಂದ ಬರುವವರಾಗಿದ್ದಲ್ಲಿ ಒಂದು ದಿನ ಮುಂಚಿತವಾಗಿ
ಮಧ್ಯಾಹ್ನದೊಳಗೆ ಬರಬೇಕು.
🌼 ಸರಳತೆ –- ಸಂಸ್ಕಾರ –- ಸೇವೆ
ಧರ್ಮಸ್ಥಳದ ಸಾಮೂಹಿಕ ವಿವಾಹವು ‘ಸರಳ ಜೀವನ, ಉನ್ನತ ಚಿಂತನೆ’ ಎಂಬ ಮೌಲ್ಯವನ್ನು ಸಮಾಜಕ್ಕೆ ಸಾರುತ್ತದೆ. ಮದುವೆ ಅಂದರೆ ಅತಿಯಾದ ಖರ್ಚು ಮತ್ತು ಪ್ರದರ್ಶನವಲ್ಲ; ಅದು ಎರಡು ಮನಸ್ಸುಗಳ ಪವಿತ್ರ ಬಂಧನ ಎಂಬ ಸಂದೇಶವನ್ನು ಈ ಕಾರ್ಯಕ್ರಮ ನೀಡುತ್ತದೆ.
ಆರ್ಥಿಕ ಸಂಕಷ್ಟದಲ್ಲಿರುವ ಅನೇಕ ಕುಟುಂಬಗಳಿಗೆ ಇದು ದೇವರ ವರದಂತಿದೆ. ಖರ್ಚಿನ ಭಾರವಿಲ್ಲದೆ, ಗೌರವಯುತವಾಗಿ ಮದುವೆಯಾಗಲು ಇದು ಅತ್ಯುತ್ತಮ ವೇದಿಕೆ.