Chartered Sahakari Bank Recruitment 2026: 9 Posts for Junior Assistant & Driver – 18 ಫೆಬ್ರವರಿ ಒಳಗೆ ಅರ್ಜಿ ಸಲ್ಲಿಸಿ
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ, ಕೋರಮಂಗಲ, ಬೆಂಗಳೂರು ಇವರು 2026 ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿ ಮೂಲಕ ಒಟ್ಟು 9 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಕಿರಿಯ ಸಹಾಯಕ (Junior Assistant) ಮತ್ತು ಚಾಲಕ ಕಂ ಅಟೆಂಡರ್ (Driver cum Attender) ಹುದ್ದೆಗಳು ಸೇರಿವೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 18 ಫೆಬ್ರವರಿ 2026 ರ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಹುದ್ದೆಗಳ ವಿವರ
ಈ ಅಧಿಸೂಚನೆಯ ಪ್ರಕಾರ ಲಭ್ಯವಿರುವ ಹುದ್ದೆಗಳು ಕೆಳಕಂಡಂತಿವೆ:
-
ಕಿರಿಯ ಸಹಾಯಕ – 7 ಹುದ್ದೆಗಳು
-
ಚಾಲಕ ಕಂ ಅಟೆಂಡರ್ – 2 ಹುದ್ದೆಗಳು
ಒಟ್ಟು ಹುದ್ದೆಗಳು: 9 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಆಯ್ಕೆಯಾದ ಅಭ್ಯರ್ಥಿಗಳನ್ನು ಬ್ಯಾಂಕಿನ ಪ್ರಸ್ತುತ ಹಾಗೂ ಮುಂದಿನ ಶಾಖೆಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ.
ವಿದ್ಯಾರ್ಹತೆ
ಕಿರಿಯ ಸಹಾಯಕ ಹುದ್ದೆಗೆ ಅವಶ್ಯಕ ವಿದ್ಯಾರ್ಹತೆ
ಕಿರಿಯ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪದವಿಯಲ್ಲಿ ಕನಿಷ್ಠ 60 ಶೇಕಡಾ ಅಂಕಗಳನ್ನು ಪಡೆದಿರಬೇಕು.
ಬಿ.ಕಾಂ, ಎಂ.ಕಾಂ ಅಥವಾ ಎಂಬಿಎ (Finance) ಪದವಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಕಂಪ್ಯೂಟರ್ ಜ್ಞಾನ ಇರಬೇಕು. ಅಭ್ಯರ್ಥಿಗೆ ಕನ್ನಡ ಭಾಷೆ ಓದಲು, ಬರೆಯಲು, ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ಚೆನ್ನಾಗಿ ಬರಬೇಕು.
ಚಾಲಕ ಕಂ ಅಟೆಂಡರ್ ಹುದ್ದೆಗೆ ಅವಶ್ಯಕ ವಿದ್ಯಾರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು. ಜೊತೆಗೆ ಮಾನ್ಯ ಲಘು ಮೋಟಾರು ವಾಹನ ಚಾಲನಾ ಪರವಾನಗಿ (LMV Driving License) ಇರಬೇಕು.
ವಾಹನ ಚಾಲನೆಗೆ ಸಂಬಂಧಿಸಿದ ಮೂಲಭೂತ ಜ್ಞಾನ ಹಾಗೂ ರಸ್ತೆ ನಿಯಮಗಳ ಅರಿವು ಉತ್ತಮವಾಗಿರಬೇಕು.
ಸದರಿ ಹುದ್ದೆಗಳಿಗೆ ವಯೋಮಿತಿ ವಿವರ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು.
ಗರಿಷ್ಠ ವಯೋಮಿತಿ ವರ್ಗವಾರು ಈ ಕೆಳಗಿನಂತಿದೆ:
-
ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗ / ಪ್ರವರ್ಗ-1: 40 ವರ್ಷ
-
ಹಿಂದುಳಿದ ವರ್ಗ (OBC): 38 ವರ್ಷ
-
ಸಾಮಾನ್ಯ ವರ್ಗ: 35 ವರ್ಷ
ಮೀಸಲು ವರ್ಗದ ಅಭ್ಯರ್ಥಿಗಳು ಮಾನ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.
ವೇತನ ವಿವರ
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಹಾಗೂ ಭತ್ಯೆಗಳನ್ನು ನೀಡಲಾಗುತ್ತದೆ.
ಕಿರಿಯ ಸಹಾಯಕ ಹುದ್ದೆಗೆ:
ಮಾಸಿಕ ವೇತನ ರೂ: 37,500 ರಿಂದ ರೂ: 76,100 ವರೆಗೆ. ಇದರ ಜೊತೆಗೆ ಮಹಂಗಾಯಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ನಗರ ಪರಿಹಾರ ಭತ್ಯೆ ಹಾಗೂ ಇತರೆ ಸೌಲಭ್ಯಗಳು ದೊರೆಯುತ್ತವೆ.
ಚಾಲಕ ಕಂ ಅಟೆಂಡರ್ ಹುದ್ದೆಗೆ:
ಮಾಸಿಕ ವೇತನ ರೂ: 29,600 ರಿಂದ ರೂ: 52,800 ವರೆಗೆ ಹಾಗೂ ಅನ್ವಯಿಸುವ ಭತ್ಯೆಗಳು.
ಅರ್ಜಿ ಶುಲ್ಕದ ವಿವರ
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಕೆಳಗಿನಂತೆ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು:
-
SC / ST / ಪ್ರವರ್ಗ-1: ರೂ: 1200
-
ಇತರೆ ವರ್ಗಗಳು: ರೂ : 2000
ಡಿಮ್ಯಾಂಡ್ ಡ್ರಾಫ್ಟ್ “Chartered Sahakari Bank Niyamitha” ಹೆಸರಲ್ಲಿ ಇರಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆ ಪ್ರಕ್ರಿಯೆ ಹೇಗೆ ?
ಕಿರಿಯ ಸಹಾಯಕ ಹುದ್ದೆಗೆ
ಕಿರಿಯ ಸಹಾಯಕ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ ಒಟ್ಟು 200 ಅಂಕಗಳಿರುತ್ತದೆ. ವಿಷಯವಾರು ಹಂಚಿಕೆ ಹೀಗಿದೆ:
-
ಕನ್ನಡ ಭಾಷೆ – 50 ಅಂಕ
-
ಸಾಮಾನ್ಯ ಇಂಗ್ಲಿಷ್ – 25 ಅಂಕ
-
ಸಾಮಾನ್ಯ ಜ್ಞಾನ – 25 ಅಂಕ
-
ಸಹಕಾರಿ ವಿಷಯಗಳು – 60 ಅಂಕ
-
ಭಾರತ ಸಂವಿಧಾನ – 25 ಅಂಕ
-
ಬ್ಯಾಂಕಿಂಗ್ ಮತ್ತು ಕಚೇರಿ ಕಾರ್ಯ – 25 ಅಂಕ
ಲಿಖಿತ ಪರೀಕ್ಷೆಗೆ 85 ಶೇಕಡಾ ಅಂಕ ಮತ್ತು ಸಂದರ್ಶನಕ್ಕೆ 15 ಶೇಕಡಾ ಅಂಕ ನೀಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
ಚಾಲಕ ಕಂ ಅಟೆಂಡರ್ ಹುದ್ದೆಗೆ
ಈ ಹುದ್ದೆಗೆ ಅಭ್ಯರ್ಥಿಗಳು ಕನ್ನಡ ಭಾಷೆ, ಸಾಮಾನ್ಯ ಜ್ಞಾನ ಹಾಗೂ ವಾಹನ ಚಾಲನಾ ಸಾಮರ್ಥ್ಯದ ಪರೀಕ್ಷೆ ಬರೆಯಬೇಕು. ಜೊತೆಗೆ ಸಂದರ್ಶನ ನಡೆಯುತ್ತದೆ. ಈ ಎಲ್ಲಾ ಹಂತಗಳಲ್ಲಿನ ಸಾಧನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
-
ಅರ್ಜಿ ಪ್ರಾರಂಭ ದಿನಾಂಕ: 28 ಜನವರಿ 2026
-
ಕೊನೆಯ ದಿನಾಂಕ: 18 ಫೆಬ್ರವರಿ 2026 ಮತ್ತು ಸಮಯ: ಸಂಜೆ 5.30 ಗಂಟೆ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಈ ಕೆಳಗಿನ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗಳಿಂದ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿಕೊಳ್ಳಬೇಕು:
-
charteredsahakaribank.in
ನಂತರ ಅರ್ಜಿಯನ್ನು ಭರ್ತಿ ಮಾಡಿ ಈ ದಾಖಲೆಗಳನ್ನು ಲಗತ್ತಿಸಬೇಕು:
-
ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ
-
ಎಸ್.ಎಸ್.ಎಲ್.ಸಿ ಅಂಕಪಟ್ಟಿ
-
ಪದವಿ ಪ್ರಮಾಣ ಪತ್ರಗಳು
-
ಜನ್ಮ ದಿನಾಂಕದ ದೃಢೀಕರಣ
-
ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
-
ಅನುಭವ ಪ್ರಮಾಣ ಪತ್ರ (ಇದ್ದರೆ)
ಈ ಎಲ್ಲಾ ದಾಖಲೆಗಳೊಂದಿಗೆ ಡಿಮ್ಯಾಂಡ್ ಡ್ರಾಫ್ಟ್ ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Chartered Sahakari Bank Niyamitha
No.1, 1st Main Road,
1st Block, Koramangala,
Bangalore – 560034
ಅಂಚೆ ಮೂಲಕ ಅಥವಾ ಖುದ್ದಾಗಿ ಅರ್ಜಿಯನ್ನು ಸಲ್ಲಿಸಬಹುದು.
ವಿಶೇಷ ಸೂಚನೆ
ಸರ್ಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ನಿರಪೇಕ್ಷಣಾ ಪತ್ರ (NOC) ಸಲ್ಲಿಸಬೇಕು. ಲಿಖಿತ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗಬೇಕು.
ತಪ್ಪು ಮಾಹಿತಿ ನೀಡಿದರೆ ಅಥವಾ ಅರ್ಜಿ ಅಪೂರ್ಣವಾಗಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ಪ್ರೊಬೇಷನ್ ಅವಧಿಗೆ ನೇಮಿಸಲಾಗುತ್ತದೆ. ಈ ಅವಧಿಯಲ್ಲಿ ಸೇವೆ ತೃಪ್ತಿಕರವಾಗಿದ್ದರೆ ಮುಂದುವರಿಸಲಾಗುತ್ತದೆ.
ಈ ನೇಮಕಾತಿ ಪ್ರಕ್ರಿಯೆಯಲ್ಲಿ ಬ್ಯಾಂಕಿನ ನೇಮಕಾತಿ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ರಾಜಕೀಯ ಒತ್ತಡ ಅಥವಾ ಪ್ರಭಾವ ತೋರಿದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಈ ನೇಮಕಾತಿ ಯುವ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಒಂದು ದೊಡ್ಡ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೇ ತಕ್ಷಣ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಸಿದ್ಧತೆ ಆರಂಭಿಸುವುದು ಉತ್ತಮ.
ಇಂತಹ ಉಪಯುಕ್ತ ಮಾಹಿತಿಯನ್ನು ಮಿಸ್ ಮಾಡಿಕೊಳ್ಳಬೇಡಿ! ಈಗಲೇ Jobfykannada.in ನಮ್ಮ ಚಾನೆಲ್ ಫಾಲೋ ಮಾಡಿ ಮತ್ತು ಪ್ರತಿದಿನ ಹೊಸ ಅಪ್ಡೇಟ್ ಪಡೆಯಿರಿ.