Telegram Join My Telegram WhatsApp Join My WhatsApp

ಬೆಂಗಳೂರು ಟ್ರಾಫಿಕ್‌ಗೆ ಗೇಮ್ ಚೇಂಜರ್! 73 ಕಿಮೀ ಬಿಸಿನೆಸ್ ಕಾರಿಡಾರ್ – 11 ಇಂಟರ್‌ಚೇಂಜ್‌ಗಳೊಂದಿಗೆ ಸಿಟಿಗೆ ಬೈಪಾಸ್

ಬೆಂಗಳೂರಿನಲ್ಲಿ ಟ್ರಾಫಿಕ್ ಅಂದ್ರೆ ಹೊಸ ವಿಷಯ ಏನಲ್ಲ. ಬೆಳಿಗ್ಗೆ ಆಫೀಸ್‌ಗೆ ಹೊರಟ್ರೆ “ಇವತ್ತು ಬೇಗ ಹೋಗ್ಬೇಕು” ಅಂತ ಯೋಚಿಸ್ತೀವಿ… ಆದ್ರೆ 10 ನಿಮಿಷದ ದಾರಿ 45 ನಿಮಿಷ ಆಗ್ತದೆ! ಸಂಜೆ ಮನೆಗೆ ಬರೋ ಸಮಯಕ್ಕೆ ಮತ್ತೆ ಅದೇ ಕತೆ. Outer Ring Road ಅಂದ್ರೆ ಜನಕ್ಕೆ ಹೆದರಿಕೆ ಶುರು ಆಗೋ ಮಟ್ಟಿಗೆ ಹೋಗಿದೆ.

ಈ ಪರಿಸ್ಥಿತಿಯಲ್ಲಿ ಈಗ ಒಂದು ದೊಡ್ಡ ಗುಡ್ ನ್ಯೂಸ್ ಬಂದಿದೆ. Bengaluru Development Authority (BDA) ಮುಂದೆ ಬಂದು 73 ಕಿಲೋ ಮೀಟರ್ ಉದ್ದದ “Bengaluru Business Corridor” ಅನ್ನೋ ದೊಡ್ಡ ರಸ್ತೆ ಯೋಜನೆಗೆ ವೇಗ ಕೊಡ್ತಿದೆ. ಇದನ್ನ ಮೊದಲು Peripheral Ring Road (PRR) ಅಂತ ಕರೀತಿದ್ರು.

ಸರಳವಾಗಿ ಹೇಳ್ಬೇಕಂದ್ರೆ – ಇದು ಬೆಂಗಳೂರಿಗೆ ಸುತ್ತಲೂ ಹೋಗೋ ದೊಡ್ಡ ಬೈಪಾಸ್ ರಸ್ತೆ. ಸಿಟಿ ಒಳಗೆ ಬರದೆ ಹೊರಗಡೆಯಿಂದಲೇ ನಿಮ್ಮ ಪ್ರಯಾಣ ಮುಗಿಸಿಕೊಳ್ಳೋ ವ್ಯವಸ್ಥೆ ಇದಾಗಿರುತ್ತದೆ.

🛣️ 73 ಕಿಮೀ ಸೂಪರ್ ಫಾಸ್ಟ್ ರಸ್ತೆ – ಸಿಗ್ನಲ್ ಇಲ್ಲ, ಸ್ಟಾಪ್ ಇಲ್ಲ!

ಈ ಕಾರಿಡಾರ್ 8 ಲೇನ್‌ಗಳ ದೊಡ್ಡ ಎಕ್ಸ್‌ಪ್ರೆಸ್ ವೇ ಆಗಿರುತ್ತೆ. ಅಂದರೆ:

  • ಮಧ್ಯದಲ್ಲಿ ಸಿಗ್ನಲ್ ಇರೋದಿಲ್ಲ

  • ಸಾಮಾನ್ಯ ಕ್ರಾಸ್ ರಸ್ತೆ ಇರೋದಿಲ್ಲ

  • ಯಾರೂ ನೇರವಾಗಿ ಹತ್ತಿ ಇಳಿಯೋದಿಕ್ಕೆ ಆಗುವುದಿಲ್ಲ

  • ಕೇವಲ 11 ನಿಗದಿತ ಇಂಟರ್‌ಚೇಂಜ್ ಮೂಲಕ ಮಾತ್ರ ಎಂಟ್ರಿ & ಎಕ್ಸಿಟ್ ಆಗಬಹುದು

ಅಂದರೆ ಒಮ್ಮೆ ರಸ್ತೆಗೆ ಹತ್ತಿದ್ರೆ, ನಿಲ್ಲದೆ ಫುಲ್ ಸ್ಪೀಡ್‌ನಲ್ಲಿ ಹೋಗಬಹುದು.

ಹೆವಿ ಲಾರಿಗಳು, ಇಂಟರ್‌ಸ್ಟೇಟ್ ವಾಹನಗಳು, ಟ್ರಕ್‌ಗಳು – ಇವುಗಳು ಸಿಟಿ ಒಳಗೆ ಬರಬೇಕಾಗಿಲ್ಲ. ಹೊರಗಡೆಯಿಂದಲೇ ಸುತ್ತಿ ಹೋಗಬಹುದು. ಇದರಿಂದ ಒಳನಗರದ ಟ್ರಾಫಿಕ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗೋ ಸಾಧ್ಯತೆ ಇದೆ.

📍 ಈ ರಸ್ತೆ ಎಲ್ಲಿಂದ ಶುರು, ಎಲ್ಲಿಗೆ ಮುಗಿಯುತ್ತೆ? ಬನ್ನಿ ನೋಡೋಣ !

ಈ ವೃತ್ತಾಕಾರದ ರಸ್ತೆ ಶುರುವಾಗೋದು:

  • ತುಮಕೂರು ರಸ್ತೆ (ಮಾದಾವರ NH 4)

  • ಅಲ್ಲಿ ಇಂದ ಉತ್ತರ & ಪೂರ್ವ ಭಾಗ ಸುತ್ತಿ

  • ಕೊನೆಗೆ ಹೋಸೂರು ರಸ್ತೆ (ಕೊನಪ್ಪನ ಅಗ್ರಹಾರ) ಕಡೆ ಮುಗಿಯುತ್ತೆ

ಇದು ಈಗಿರುವ NICE Road ಜೊತೆ ಕನೆಕ್ಟ್ ಆಗುತ್ತೆ. ಅಂದರೆ ಬೆಂಗಳೂರಿಗೆ ಸುತ್ತಲೂ ಸಂಪೂರ್ಣ ರಿಂಗ್ ಸಿಸ್ಟಮ್ ರೆಡಿ ಆಗೋ ತರಹ ತಯಾರಾಗುತ್ತಿದೆ.

🔁 11 ಜಾಗಗಳಲ್ಲಿ ಮಾತ್ರ ಹತ್ತೋಕೆ, ಇಳಿಯೋಕೆ ಅವಕಾಶ ಕೊಡಲಾಗಿದೆ.

BDA ಈಗಾಗಲೇ 11 ಮುಖ್ಯ ಜಾಗಗಳನ್ನು ಫೈನಲ್ ಮಾಡಿದೆ. ಈ ಜಾಗಗಳಲ್ಲಿ ದೊಡ್ಡ ಇಂಟರ್‌ಚೇಂಜ್ ನಿರ್ಮಾಣ ಆಗುತ್ತೆ.

ಆ ಇಂಟರ್ಚೇಂಜ್ ರಸ್ತೆಗಳು ಯಾವುವು ಅಂದ್ರೆ:

  • ಹೋಸೂರು ರಸ್ತೆ (ಎಲೆಕ್ಟ್ರಾನಿಕ್ ಸಿಟಿ ಕಡೆ)

  • ಸರ್ಜಾಪುರ ರಸ್ತೆ

  • ಗುಂಜೂರು ರಸ್ತೆ

  • ವೈಟ್‌ಫೀಲ್ಡ್ ರಸ್ತೆ

  • ಓಲ್ಡ್ ಮದ್ರಾಸ್ ರಸ್ತೆ

  • ಹೆನ್ನೂರು ರಸ್ತೆ

  • ಬಳ್ಳಾರಿ ರಸ್ತೆ

  • ದೊಡ್ಡಬಳ್ಳಾಪುರ ರಸ್ತೆ

  • ಹೆಸರಘಟ್ಟ ರಸ್ತೆ

  • ಮಾದಾವರ NH 4 (NICE ಸಂಪರ್ಕ)

  • ಮಾದನಾಯಕನಹಳ್ಳಿ ರಸ್ತೆ

ಈ ಇಂಟರ್‌ಚೇಂಜ್‌ಗಳಲ್ಲಿ ಬಹುತೇಕ “ಕ್ಲೋವರ್ ಲೀಫ್” ಡಿಸೈನ್ ಇರತ್ತೆ. ಅಂದರೆ ವಾಹನಗಳು ಸಿಗ್ನಲ್ ಇಲ್ಲದೆ ಸುಲಭವಾಗಿ ದಿಕ್ಕು ಬದಲಾಯಿಸಬಹುದು. ಟ್ರಾಫಿಕ್ ಜಾಮ್ ಆಗೋ ಚಾನ್ಸ್ ಕಡಿಮೆ ಇರುತ್ತದೆ.

💰 ಈ ಪ್ರಾಜೆಕ್ಟ್ ಸೈಜ್ ಎಷ್ಟು ದೊಡ್ಡದು ಗೊತ್ತಾ?

ಈ ಯೋಜನೆಗೆ ಅಂದಾಜು ವೆಚ್ಚ – ಸುಮಾರು ₹26,786 ಕೋಟಿ! ಇರುತ್ತದೆ 😱

ಇದರೊಳಗೆ:

  • ಭೂಸ್ವಾಧೀನ

  • ಸೇತುವೆಗಳು

  • ಇಂಟರ್‌ಚೇಂಜ್‌ಗಳು

  • ಸೇವಾ ರಸ್ತೆಗಳು

  • ಸಂಪೂರ್ಣ ಮೂಲಸೌಕರ್ಯ ವ್ಯವಸ್ಥೆಗಳು ಎಲ್ಲವೂ ಸೇರಿವೆ.

ವರ್ಷಗಳ ಕಾಲ ಈ ಪ್ರಾಜೆಕ್ಟ್ ಅಡೆತಡೆಗಳಲ್ಲಿ ಸಿಲುಕಿತ್ತು. ಆದರೆ ಈಗ ಭೂಸ್ವಾಧೀನ ಕೆಲಸ ವೇಗ ಪಡೆದುಕೊಂಡಿದೆ ಅಂತ ಮಾಹಿತಿ ಬಂದಿದೆ.

🚗 ಯಾರಿಗೆ ಇದರಿಂದ ಹೆಚ್ಚು ಲಾಭ?

ನೇರವಾಗಿ ಹೇಳ್ಬೇಕಂದ್ರೆ – ವೈಟ್‌ಫೀಲ್ಡ್ & ಸರ್ಜಾಪುರ ಭಾಗದ ಐಟಿ ಜನರಿಗೆ ಇದು ದೊಡ್ಡ ರಿಲೀಫ್ ಆಗಬಹುದು.

ಪ್ರತಿ ದಿನ Outer Ring Road ನಲ್ಲಿ ಗಂಟೆಗಳ ಕಾಲ ಕೂರುವವರು ಇದರಿಂದ ಲಾಭ ಪಡೆಯಬಹುದು. ಹೆವಿ ವಾಹನಗಳು ಸಿಟಿ ಒಳಗೆ ಕಡಿಮೆ ಬಂದರೆ ಟ್ರಾಫಿಕ್ ಒತ್ತಡ ಸ್ವಲ್ಪ ಮಟ್ಟಿಗೆ ಇಳಿಯಬಹುದು.

ಉತ್ತರ ಬೆಂಗಳೂರು ಭಾಗ – ಹೆನ್ನೂರು, ಬಳ್ಳಾರಿ ರಸ್ತೆ, ದೊಡ್ಡಬಳ್ಳಾಪುರ ಭಾಗಕ್ಕೂ ಈ ರಸ್ತೆ ತುಂಬ ಉಪಯೋಗ ಆಗುತ್ತೆ.

🤔 ಟ್ರಾಫಿಕ್ ಸಂಪೂರ್ಣವಾಗಿ ಹೋಗುತ್ತಾ?

ನಿಜ ಹೇಳ್ಬೇಕಂದ್ರೆ – ಒಂದೇ ರಸ್ತೆ ಬಂದರೆ ಬೆಂಗಳೂರಿನ ಟ್ರಾಫಿಕ್ ಪೂರ್ಣವಾಗಿ ಮುಗಿಯೋದಿಲ್ಲ. ಆದರೆ ಇದು ದೊಡ್ಡ ಮಟ್ಟದ ಸಹಾಯ ಮಾಡಬಹುದು.

ಈ ಕಾರಿಡಾರ್ ಗಳು ಬಂದ ಮೇಲೆ:

  • ಸಿಟಿ ಮಧ್ಯ ಭಾಗದಲ್ಲಿ ಟ್ರಕ್ ಸಂಚಾರ ಕಡಿಮೆಯಾಗಬಹುದು

  • ದೂರ ಪ್ರಯಾಣ ವಾಹನಗಳು ಒಳಗೆ ಬರೋದಿಲ್ಲ

  • ಕೆಲ ಭಾಗಗಳಲ್ಲಿ ಪ್ರಯಾಣ ಸಮಯ ಕಡಿಮೆಯಾಗಬಹುದು

  • ಇಂಧನ ಉಳಿವು & ಮಾಲಿನ್ಯ ಕಡಿಮೆಯಾಗೋ ಸಾಧ್ಯತೆ ಇದೆ

ಆದ್ರೆ ಇದು ಹೇಗೆ ಅನುಷ್ಠಾನಗೊಳ್ಳುತ್ತೆ ಅನ್ನೋದು ಕೂಡ ಮುಖ್ಯ.

🏙️ ಬೆಂಗಳೂರಿನ ಭವಿಷ್ಯಕ್ಕೆ ಇದು ದೊಡ್ಡ ಹೆಜ್ಜೆ !!

ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಐಟಿ ಕಂಪನಿಗಳು, ಹೊಸ ಅಪಾರ್ಟ್‌ಮೆಂಟ್‌ಗಳು, ಹೊಸ ಲೇಔಟ್‌ಗಳು – ಎಲ್ಲವೂ ಹೆಚ್ಚಾಗ್ತಿದೆ. ಆದರೆ ರಸ್ತೆ ವ್ಯವಸ್ಥೆ ಅದೇ ಮಟ್ಟಿಗೆ ಬೆಳೆದಿಲ್ಲ.

ಈ 73 ಕಿಮೀ ಕಾರಿಡಾರ್ ಪೂರ್ಣಗೊಂಡರೆ:

  • ಹೊರವಲಯದ ಅಭಿವೃದ್ಧಿಗೆ ಬೂಸ್ಟ್ ಸಿಗುತ್ತೆ

  • ಕೈಗಾರಿಕಾ ಪ್ರದೇಶಗಳಿಗೆ ವೇಗದ ಸಂಪರ್ಕ ಸಿಗುತ್ತದೆ

  • ಲಾಜಿಸ್ಟಿಕ್ಸ್ ಕಂಪನಿಗಳಿಗೆ ಲಾಭದಾಯಕ

  • ಭೂಮಿಯ ಬೆಲೆ ಹೆಚ್ಚಾಗೋ ಸಾಧ್ಯತೆ ಇರುತ್ತದೆ

ಅಂದರೆ ಇದು ಕೇವಲ ರಸ್ತೆ ಅಲ್ಲ – ನಗರ ಅಭಿವೃದ್ಧಿಗೂ ಕೂಡ ದೊಡ್ಡ ಬದಲಾವಣೆ.

🔍 ಪ್ರಾಜೆಕ್ಟ್ ನ ಈಗಿನ ಸ್ಥಿತಿ ಏನು? ಬನ್ನಿ ತಿಳಿಯೋಣ !

ಈಗ ಪ್ರಾಜೆಕ್ಟ್ ಭೂಸ್ವಾಧೀನ ಹಂತದಲ್ಲಿ ಇದೆ. ಮುಂದಿನ ಹಂತಗಳಲ್ಲಿ ಟೆಂಡರ್ ಮತ್ತು ನಿರ್ಮಾಣ ಕೆಲಸ ಆರಂಭವಾಗಬಹುದು.

ಜನರಿಗೆ ದೊಡ್ಡ ಪ್ರಶ್ನೆ ಏನು ಅಂದ್ರೆ – “ಇದು ಯಾವಾಗ ರೆಡಿ ಆಗುತ್ತೆ?”

ಅದಕ್ಕೆ ಇನ್ನೂ ಖಚಿತ ದಿನಾಂಕ ಇಲ್ಲ. ಆದರೆ ಕೆಲಸ ಶುರುವಾದ ಮೇಲೆ ಹಂತ ಹಂತವಾಗಿ ಪೂರ್ಣಗೊಳಿಸುವ ಯೋಜನೆ ಇದೆ.

🚀 ಕೊನೆಯದಾಗಿ ಹೇಳುವುದಾದರೆ

ಒಂದು ಕೋಟಿ ವಾಹನಗಳ ನಗರದಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡೋದು ಸುಲಭ ಅಲ್ಲ. ಆದ್ರೆ 73 ಕಿಮೀ ಉದ್ದದ ಈ ಬಿಸಿನೆಸ್ ಕಾರಿಡಾರ್ ಬೆಂಗಳೂರಿಗೆ ಒಂದು ದೊಡ್ಡ ಶಾರ್ಟ್‌ಕಟ್ ಆಗಬಹುದು.

ವೈಟ್‌ಫೀಲ್ಡ್, ಸರ್ಜಾಪುರ, ಉತ್ತರ ಬೆಂಗಳೂರು ಭಾಗದ ಜನರಿಗೆ ಇದು ಭರವಸೆಯ ಸುದ್ದಿ ಮತ್ತು ಸಂತೋಷದ ಸುದ್ದಿ.

ಇದು ಟ್ರಾಫಿಕ್ ಸಮಸ್ಯೆಗೆ ಮ್ಯಾಜಿಕ್ ಪರಿಹಾರ ಅಲ್ಲ. ಆದರೆ ದೊಡ್ಡ ಮಟ್ಟದ ಪರಿಹಾರಕ್ಕೆ ಮೊದಲ ಹೆಜ್ಜೆ.

ಇನ್ನೂ ಕೆಲ ವರ್ಷಗಳಲ್ಲಿ ನಾವು “ಬೆಂಗಳೂರು ಟ್ರಾಫಿಕ್ ಅಷ್ಟು ಕಷ್ಟ ಇಲ್ಲ” ಅಂತ ಹೇಳೋ ದಿನ ಬರ್ತದಾ?

ಅದು ಈ ಯೋಜನೆ ಯಶಸ್ಸಿನ ಮೇಲೆ ಅವಲಂಬಿತವಾಗಿದೆ.

ಇಂತಹ ಉಪಯುಕ್ತ ಮಾಹಿತಿಯನ್ನು ಮಿಸ್ ಮಾಡಿಕೊಳ್ಳಬೇಡಿ! Jobfykannada.in ನಮ್ಮ ಚಾನೆಲ್ ಫಾಲೋ ಮಾಡಿ ಮತ್ತು ಪ್ರತಿದಿನ ಹೊಸ ಅಪ್ಡೇಟ್ ಪಡೆಯಿರಿ.

Leave a Comment