Telegram Join My Telegram WhatsApp Join My WhatsApp

🧠 ಹೊಸ ಐಟಿ ರೂಲ್ಸ್ 2026: ಎಐ ಸೃಷ್ಟಿತ ಕಂಟೆಂಟ್‌ಗೆ ಲೇಬಲ್ ಕಡ್ಡಾಯ

🧠 ಹೊಸ ಐಟಿ ರೂಲ್ಸ್ 2026: ಎ ಐ ಸೃಷ್ಟಿತ ಕಂಟೆಂಟ್‌ಗೆ ಲೇಬಲ್ ಕಡ್ಡಾಯ

ಎ ಐ (Artificial Intelligence) ತಂತ್ರಜ್ಞಾನ ಇಂದು ಫೋಟೋ, ವಿಡಿಯೋ ಮತ್ತು ಧ್ವನಿಗಳ ಮೂಲಕ ನೈಜತೆಗೂ ಮೀರಿದ ಅನುಭವ ನೀಡುತ್ತಿದೆ. ಆದರೆ ಇದೇ ತಂತ್ರಜ್ಞಾನವನ್ನು ಬಳಸಿ ಡೀಪ್‌ಫೇಕ್, ನಕಲಿ ವಿಡಿಯೋಗಳು ಮತ್ತು ತಪ್ಪು ಮಾಹಿತಿ ಹರಡುವ ಅಪಾಯ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ 2026 ರ ಫೆಬ್ರವರಿ 20 ರಿಂದ ಹೊಸ ಐಟಿ ನಿಯಮಗಳನ್ನು ಜಾರಿಗೆ ತರುತ್ತಿದೆ.

ಈ ನಿಯಮಗಳನ್ನು ಹಂತ ಹಂತವಾಗಿ ಅರ್ಥಮಾಡಿಕೊಂಡರೆ ಜನರಿಗೆ ಸ್ಪಷ್ಟವಾಗುತ್ತದೆ. ಈ ಕೆಳಕಂಡಂತೆ ವಿವರವನ್ನು ತಿಳಿಸಲಾಗಿದೆ.

✅ ಎ ಐ ಕಂಟೆಂಟ್‌ಗೆ ಲೇಬಲ್ ಹಾಕುವುದು ಕಡ್ಡಾಯ

ಇನ್ನು ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ upload ಮಾಡುವ

📌 ಎ ಐ ಮೂಲಕ ಸೃಷ್ಟಿಸಿದ ಫೋಟೋ ಗಳು
📌 ಡೀಪ್‌ಫೇಕ್ ವಿಡಿಯೋ ಗಳು
📌 ಸಿಂಥೆಟಿಕ್ ಆಡಿಯೋ ಗಳು

ಇವೆಲ್ಲಕ್ಕೂ “AI Generated Content” ಎಂಬ ಸ್ಪಷ್ಟ ಲೇಬಲ್ ಇರಬೇಕು.

ಸಾಮಾಜಿಕ ಜಾಲತಾಣಗಳ ಧೈತ್ಯರಾದಂತಹ

✔ ಫೇಸ್‌ಬುಕ್ 
✔ ಇನ್‌ಸ್ಟಾಗ್ರಾಂ
✔ ಯೂಟ್ಯೂಬ್
✔ ಎಕ್ಸ್ (Twitter)

ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಇದು ಕಡ್ಡಾಯವಾಗಿರುತ್ತದೆ.

✅ ಪ್ಲಾಟ್‌ಫಾರ್ಮ್‌ಗಳಿಗೂ ತಂತ್ರಜ್ಞಾನ ಹೊಣೆಗಾರಿಕೆ

ಸೋಷಿಯಲ್ ಮೀಡಿಯಾ ಕಂಪನಿಗಳು

🔹 ಮೆಟಾಡೇಟಾ ಎಂಬೆಡ್ ಮಾಡಬೇಕು
🔹 ಯೂನಿಕ್ ಐಡೆಂಟಿಫಿಕೇಶನ್ ಬಳಸಿ ಕೊಳ್ಳಬೇಕು
🔹 ಎ ಐ ಡಿಟೆಕ್ಷನ್ ಟೂಲ್ ಅಳವಡಿಸಿ ಕೊಳ್ಳಬೇಕು

ಅಂದರೆ ಕೇವಲ ಬಳಕೆದಾರರ ಮಾತಿನ ಮೇಲೆ ನಂಬದೇ ತಂತ್ರಜ್ಞಾನದಿಂದಲೇ ಪರಿಶೀಲನೆ ಮಾಡಬೇಕು ಎಂಬುದು ಇದರ ಅರ್ಥ.

✅ ಯಾವುದು ಎ ಐ ಕಂಟೆಂಟ್ ಎಂದು ಪರಿಗಣನೆ?

ಹೊಸ ನಿಯಮಗಳ ಪ್ರಕಾರ:

✔ ನೈಜ ವ್ಯಕ್ತಿಯಂತೆ ಕಾಣುವ ವಿಡಿಯೋ ತುಣುಕುಗಳನ್ನು ಪರಿಶೀಲಿಸುವುದು
✔ ನಿಜವಾದ ಧ್ವನಿಯಂತೆ ತೋರಿಸುವ ಆಡಿಯೋ / Voiceover ಗಳನ್ನು ಪರಿಶೀಲಿಸುವುದು
✔ ಕಂಪ್ಯೂಟರ್ ಮೂಲಕ ಸೃಷ್ಟಿಸಿದ ಚಿತ್ರಗಳು / ಎ ಐ ಮೂಲಕ ಸೃಷ್ಟಿಸಿದ ಚಿತ್ರಗಳನ್ನು ಸ್ಕ್ಯಾನ್‌ ಮಾಡುವ ಮೂಲಕ ಪರಿಶೀಲಿಸಿ

ಇವೆಲ್ಲವೂ ಎ ಐ ಮೂಲಕ ಸೃಷ್ಟಿತ ಕಂಟೆಂಟ್ ಗಳ ಎಂದು ಪರಿಶಿಲಿಸಬೇಕು.

🚫 ಆದರೆ ಕಲರ್ ಕರೆಕ್ಷನ್ ಮಾಡುವುದು
🚫 ಬ್ರೈಟ್ನೆಸ್ ಬದಲಾವಣೆ ಮಾಡುವುದು
🚫 ನೊಯಿಸ್ ರಿಮೂವಲ್ ಮಾಡಿ Upload ಮಾಡುವುದು

ಇವು ಸಾಮಾನ್ಯ ಎಡಿಟಿಂಗ್ ಗಳಾಗಿರುತ್ತದೆ — ಇದು ಅಪರಾಧವಾಗುವುದಿಲ್ಲ.

✅ ಬಳಕೆದಾರರಿಗೆ ನೇರ ಜವಾಬ್ದಾರಿ

ಈಗ ಯಾರಾದರೂ ಎ ಐ ಮೂಲಕ ಜೆನರೇಟ್‌ ಮಾಡಿ

📷 ಫೋಟೋ ಅಪ್‌ಲೋಡ್ ಮಾಡುವಾಗ
🎥 ವಿಡಿಯೋ ಪೋಸ್ಟ್ ಮಾಡುವಾಗ

ಅದು ಎ ಐ ಜನರೇಟೆಡ್ ಆಗಿದ್ದರೆ ಕಡ್ಡಾಯವಾಗಿ ಘೋಷಿಸಬೇಕು.

❗ ಮರೆಮಾಚಿದರೆ ಕಾನೂನು ಸಮಸ್ಯೆ ಎದುರಿಸಬೇಕಾಗಬಹುದು, ಇದನ್ನು ಎಚ್ಚರಿಕೆಯಿಂದ ಗಮನಿಸಬೇಕು.

✅ ತಪ್ಪು ಘೋಷಣೆಗೆ ಕ್ರಾಸ್ ವೆರಿಫಿಕೇಶನ್

ಸರ್ಕಾರ ಪ್ರಮುಖವಾಗಿ ಹೇಳುತ್ತಿರುವುದೇನೆಂದರೆ

🔍 ಯಾರಾದರೂ ಎ ಐ ಮೂಲಕ ವಿಡಿಯೋಗಳನ್ನು ಜನರೇಟ್‌ ಮಾಡಿ ಸಮಾಜಕ್ಕೆ ಸುಳ್ಳು ಹೇಳಿದರೂ
🤖 ಆಟೊಮೇಟೆಡ್ ಟೂಲ್ ಮೂಲಕ ಪತ್ತೆಹಚ್ಚಬೇಕು. ಎ ಐ ಪ್ಲಾಟ್‌ಫಾರ್ಮ್‌ಗಳು ಇದನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು.

✅ ಕಂಟೆಂಟ್ ತೆಗೆದುಹಾಕುವ ಸಮಯ ಕಡಿತ

ಹಿಂದೆ ಇದ್ದ ಕಂಟೆಂಟ್ ತೆಗೆದುಹಾಕುವ ಸಮಯದ ಗಡುವು ಈಗ ಬಹಳ ಕಠಿಣವಾಗಿದೆ ಮತ್ತು ಕಡಿಮೆಗೊಳಿಸಿದೆ:

⏰ ಈ ಹಿಂದೆ 36 ಗಂಟೆ ಸಮಯಾವಕಾಶ ಇದ್ದರೆ ಪ್ರಸ್ತುತ → 3 ಗಂಟೆಗೆ ಇಳಿಸಲಾಗಿದೆ
📆 ಈ ಹಿಂದೆ 15 ದಿನಗಳ ಸಮಯಾವಕಾಶ ಇದ್ದರೆ ಪ್ರಸ್ತುತ → 7 ದಿನಗಳವರೆಗೆ ನೀಡಲಾಗಿದೆ
⌛ ಈ ಹಿಂದೆ 24 ಗಂಟೆ ಸಮಯಾವಕಾಶ ಇದ್ದರೆ ಪ್ರಸ್ತುತ → 12 ಗಂಟೆ ಗಂಟೆಗೆ ಇಳಿಸಲಾಗಿದೆ

ಸರ್ಕಾರಿ ಆದೇಶ ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಕಾನೂನು ಕ್ರಮ ಜಾರಿಯಾಗುತ್ತದೆ.

✅ ಎ ಐ ದುರುಪಯೋಗ ಈಗ ಕ್ರಿಮಿನಲ್ ಅಪರಾಧ

ಹೊಸ ಐಟಿ ನಿಯಮಗಳು ಎಐ ಮೂಲಕ ನಡೆಯುವ ಕೆಲವು ಕೃತ್ಯಗಳನ್ನು ನೇರವಾಗಿ ಕ್ರಿಮಿನಲ್ ಅಪರಾಧಗಳೆಂದು ಘೋಷಿಸಿವೆ:

🚫 ಮಕ್ಕಳ ಲೈಂಗಿಕ ದುರ್ಬಳಕೆಯ ಕಂಟೆಂಟ್
🚫 ಅಶ್ಲೀಲ ಸಿಂಥೆಟಿಕ್ ವಿಡಿಯೋ
🚫 ನಕಲಿ ಎಲೆಕ್ಟ್ರಾನಿಕ್ ದಾಖಲೆಗಳು
🚫 ನೈಜ ವ್ಯಕ್ತಿಯನ್ನು ಹೋಲುವ ಡೀಪ್‌ಫೇಕ್‌ಗಳು
🚫 ನಕಲಿ ಧ್ವನಿ ಸೃಷ್ಟಿ

ಇವುಗಳು ಈಗ ಭಾರತೀಯ ನ್ಯಾಯ ಸಂಹಿತೆ ಹಾಗೂ ಪೋಕ್ಸೋ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಾಗಿವೆ.

✅ ಸರ್ಕಾರ ಏಕೆ ಇಷ್ಟು ಕಠಿಣವಾಗಿದೆ?

ಇತ್ತೀಚಿನ ದಿನಗಳಲ್ಲಿ:

⚠️ ಸುಳ್ಳು ರಾಜಕೀಯ ವಿಡಿಯೋ ಎಲ್ಲೆಂದರಲ್ಲಿ ಹರಿದಾಡುತ್ತಿವೆ,
⚠️ ವ್ಯಕ್ತಿಗಳ ಮಾನಹಾನಿಯಾಗುವ ಮೂಲಕ ವ್ಯಯಕ್ತಿಕ ಸಮಸ್ಯೆಗಳು ಸೃಷ್ಠಿಯಾಗುತ್ತಿವೆ.
⚠️ ಗಲಭೆ ಹುಟ್ಟಿಸುವ ನಕಲಿ ಸುದ್ದಿ ಸಾಮಾಜಿಕ ಶಾಂತಿಯನ್ನು ಹದಗೆಡಿಸುತ್ತಿರುವುದು ಎ ಐ ಮೂಲಕ ಹೆಚ್ಚಾಗಿ ನಡೆಯುತ್ತಿದೆ.

👉 ಇದನ್ನು ತಡೆಯುವುದೇ ಈ ನಿಯಮಗಳ ಮುಖ್ಯ ಉದ್ದೇಶವಾಗಿದೆ.

📌 ಸಾಮಾನ್ಯ ಜನರಿಗೆ ಏನು ಲಾಭ?

✔ ನಕಲಿ ವಿಡಿಯೋ ಗುರುತಿಸಲು ಸುಲಭವಾಗುವುದರಿಂದ ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬುದು ಸ್ಪಷ್ಟವಾಗುತ್ತದೆ
✔ ತಪ್ಪು ಮಾಹಿತಿ ಕಡಿಮೆಯಾಗುತ್ತದೆ ಇದರಿಂದ ಗೊಂದಲಗಳು ಉಂಟಾಗುವುದಿಲ್ಲ
✔ ಡಿಜಿಟಲ್ ಸುರಕ್ಷತೆ ಹೆಚ್ಚಾಗುತ್ತದೆ ಹಾಗು ವಿಶ್ವಾಸ ಬೆಳೆಯುತ್ತದೆ
✔ ಸೋಷಿಯಲ್ ಮೀಡಿಯಾ ನಂಬಿಕೆಯಾಗುತ್ತದೆ

🏁 ಅಂತಿಮವಾಗಿ…

2026ರ ಫೆಬ್ರವರಿ 20ರಿಂದ ಭಾರತದಲ್ಲಿ ಎ ಐ ಕಂಟೆಂಟ್ ಯುಗಕ್ಕೆ ಹೊಸ ನಿಯಂತ್ರಣ ಆರಂಭವಾಗಲಿದೆ. ಇನ್ನು ಮುಂದೆ ನಕಲಿ ಮತ್ತು ನೈಜದ ನಡುವಿನ ವ್ಯತ್ಯಾಸ ಸ್ಪಷ್ಟವಾಗಲಿದೆ. ಬಳಕೆದಾರರೂ ಜವಾಬ್ದಾರಿಯುತವಾಗಿ ವರ್ತಿಸಬೇಕು, ಪ್ಲಾಟ್‌ಫಾರ್ಮ್‌ಗಳೂ ಪಾರದರ್ಶಕತೆಯನ್ನು ಪಾಲಿಸಬೇಕು ಎಂಬುದೇ ಇದರ ಉದ್ದೇಶವಾಗಿದೆ.

ಇದು ಡಿಜಿಟಲ್ ಜಗತ್ತಿಗೆ ಅತ್ಯಂತ ಮಹತ್ವದ ಬದಲಾವಣೆ ಎಂದು ಹೇಳಬಹುದು.

ಇಂತಹ ಉಪಯುಕ್ತ ಮಾಹಿತಿಯನ್ನು ಮಿಸ್ ಮಾಡಿಕೊಳ್ಳಬೇಡಿ! Jobfykannada.in ನಮ್ಮ ಚಾನೆಲ್ ಫಾಲೋ ಮಾಡಿ ಮತ್ತು ಪ್ರತಿದಿನ ಹೊಸ ಅಪ್ಡೇಟ್ ಪಡೆಯಿರಿ.

Leave a Comment