India Post Payments Bank ರೂ: 799ಕ್ಕೆ ನೀಡುತ್ತಿರುವ ಅಪಘಾತ ವಿಮೆ ಯೋಜನೆಯಲ್ಲಿ ರೂ: 15 ಲಕ್ಷ ಕವರ್, ಆಸ್ಪತ್ರೆ ವೆಚ್ಚ, ಮಕ್ಕಳ ಶಿಕ್ಷಣ ಸಹಾಯ ಸೇರಿದೆ. ಇದರ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಇದೆ ಒಮ್ಮೆ ಓದಿರಿ , , ,
ಇಂದಿನ ವೇಗವಾದ ಜೀವನದಲ್ಲಿ ಅಪಘಾತಗಳು ನಮ್ಮ ಬದುಕಿನ ಭಾಗವಾಗಿಬಿಟ್ಟಿವೆ. ಬೆಳಿಗ್ಗೆ ಮನೆ ಬಿಟ್ಟು ಹೊರಟ ವ್ಯಕ್ತಿ ಸುರಕ್ಷಿತವಾಗಿ ಸಂಜೆ ಮರಳುತ್ತಾನೆಯೇ ಎಂಬುದೇ ಅನುಮಾನವಾಗಿರುವ ಕಾಲ ಇದು. ರಸ್ತೆ ಅಪಘಾತಗಳು, ಕೆಲಸದ ಸ್ಥಳದ ಅವಘಡಗಳು, ವಿದ್ಯುತ್ ಶಾಕ್, ಬಿದ್ದು ಗಾಯವಾಗುವ ಘಟನೆಗಳು ದಿನನಿತ್ಯ ಹೆಚ್ಚಾಗುತ್ತಿವೆ. ಇಂತಹ ಅಚಾನಕ್ ಸಂದರ್ಭಗಳಲ್ಲಿ ಕುಟುಂಬವು ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಮುಂಚಿತವಾಗಿ ರಕ್ಷಣಾ ವ್ಯವಸ್ಥೆ ಹೊಂದಿರುವುದು ಅತ್ಯಂತ ಅಗತ್ಯವಾಗಿದೆ. ಇದನ್ನು ಮನಗಂಡು India Post Payments Bank (IPPB) ತನ್ನ ಗ್ರಾಹಕರಿಗಾಗಿ ಕೇವಲ ರೂ: 799 ವಾರ್ಷಿಕ ಪ್ರೀಮಿಯಂನಲ್ಲಿ ರೂ: 15 ಲಕ್ಷದ ಭಾರಿ ಅಪಘಾತ ವಿಮೆ ಯೋಜನೆ ಅನ್ನು ಪರಿಚಯಿಸಿದೆ.
ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ ರೂ: 799 ಮಾತ್ರ. ಆದರೆ ಈ ಸಣ್ಣ ಮೊತ್ತಕ್ಕೆ ದೊರೆಯುವ ರಕ್ಷಣೆ ತುಂಬಾ ದೊಡ್ಡದು. IPPB ಈ ಯೋಜನೆಯನ್ನು TATA AIG ಅಥವಾ Star Health ಎಂಬ ವಿಶ್ವಾಸಾರ್ಹ ಖಾಸಗಿ ವಿಮಾ ಕಂಪನಿಗಳ ಜೊತೆಗೂಡಿ ರೂಪಿಸಿದೆ. ಸಾಮಾನ್ಯ ಜನರು, ರೈತರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಒದಗಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.
💰 ಅಪಘಾತ ಮರಣ ವಿಮೆ – ರೂ:15 ಲಕ್ಷದವರೆಗೆ ಭದ್ರತೆ ಇರುತ್ತದೆ
ಯಾವುದೇ ಅಪಘಾತದಿಂದ ವಿಮೆ ಪಡೆದ ವ್ಯಕ್ತಿ ಮೃತಪಟ್ಟರೆ, ಅವರ ಕುಟುಂಬದ ಸದಸ್ಯರಿಗೆ ಅಥವಾ ನಾಮಿನಿಗೆ ನೇರವಾಗಿ ರೂ: 15 ಲಕ್ಷ ಪರಿಹಾರ ಹಣ ದೊರೆಯುತ್ತದೆ. ಇದು ಕೇವಲ ಹಣವಲ್ಲ, ಕುಟುಂಬದ ಭವಿಷ್ಯಕ್ಕೆ ಭದ್ರತೆ. ಈ ಮೊತ್ತದಿಂದ ಸಾಲ ತೀರಿಸಿಕೊಳ್ಳಬಹುದು, ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಬಹುದು ಮತ್ತು ದಿನನಿತ್ಯದ ಜೀವನ ಸಾಗಿಸಬಹುದು. ವಿಶೇಷವಾಗಿ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಇದು ದೊಡ್ಡ ನೆರವಾಗುತ್ತದೆ.
♿ ಅಂಗವೈಕಲ್ಯಕ್ಕೆ ಸಂಪೂರ್ಣ ರಕ್ಷಣೆ ಈ ಯೋಜನೆಯಲ್ಲಿದೆ
ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದರೆ ವ್ಯಕ್ತಿಯ ಜೀವನವೇ ಬದಲಾಗುತ್ತದೆ. ಕೆಲಸ ಮಾಡಲು ಆಗದ ಸ್ಥಿತಿ ಬಂದರೆ ಆದಾಯ ನಿಲ್ಲುತ್ತದೆ. ಆದರೆ ಈ ಯೋಜನೆಯಲ್ಲಿ:
✔️ ಕೈ ಅಥವಾ ಕಾಲು ಕಳೆದುಕೊಂಡರೆ ಪರಿಹಾರದೊರೆಯುತ್ತದೆ
✔️ ಸಂಪೂರ್ಣವಾಗಿ ಕೆಲಸ ಮಾಡಲು ಆಗದ ಪರಿಸ್ಥಿತಿ ಬಂದರೂ ಕೂಡ
✔️ ಶಾಶ್ವತ ಶಾರೀರಿಕ ಹಾನಿ ಸಂಭವಿಸಿದರೆ ಈ ಎಲ್ಲಾ ಸಂದರ್ಭಗಳಲ್ಲು
ರೂ: 15 ಲಕ್ಷವರೆಗೆ ಪರಿಹಾರ ಹಣ ನೀಡಲಾಗುತ್ತದೆ. ಇದು ವ್ಯಕ್ತಿಯ ಭವಿಷ್ಯ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಮತ್ತು ಜೀವನಕ್ಕೆ ಊರುಗೋಲಾಗುತ್ತದೆ.
🏥 ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕೆ ಸಂಪೂರ್ಣ ಸಹಾಯ
ಅಪಘಾತವಾದ ನಂತರ ಆಸ್ಪತ್ರೆ ವೆಚ್ಚವೇ ಸಾಮಾನ್ಯ ಕುಟುಂಬಗಳಿಗೆ ದೊಡ್ಡ ಹೊರೆ ಆಗುತ್ತದೆ ಮತ್ತು ತುರ್ತು ಸಂದರ್ಭದಲ್ಲಿ ಹಣದ ಅವಶ್ಯಕತೆ ಇರುವುದರಿಂದ ಈ ವಿಮಾ ಯೋಜನೆಯಲ್ಲಿ:
👉 ಒಳರೋಗಿ ಚಿಕಿತ್ಸೆ (IPD): ರೂ: 1 ಲಕ್ಷವರೆಗೆ ವೆಚ್ಚ ಭರ್ತಿ
👉 ಹೊರರೋಗಿ ಚಿಕಿತ್ಸೆ (OPD): ವೈದ್ಯರ ಸಲಹೆ, ಔಷಧಿ ಮತ್ತು ಸಣ್ಣ ಚಿಕಿತ್ಸೆಗೂ ಹಣ ಸಿಗುತ್ತದೆ
ಇದರಿಂದ ಸಾಮಾನ್ಯ ಜನರು ಸಾಲ ಮಾಡಿಕೊಂಡು ಚಿಕಿತ್ಸೆ ಮಾಡಿಸುವ ಪರಿಸ್ಥಿತಿ ತಪ್ಪುತ್ತದೆ.
💵 ದಿನಸಿ ಆಸ್ಪತ್ರೆ ಭತ್ಯೆ
ಆಸ್ಪತ್ರೆಯಲ್ಲಿ ಇದ್ದಾಗ ಮನೆಯ ಮುಖ್ಯ ವ್ಯಕ್ತಿಯ ಕೆಲಸ ನಿಲ್ಲುತ್ತದೆ ಮತ್ತು ಆದಾಯವೂ ಕಡಿಮೆಯಾಗಿ ಆರ್ಥಿಕ ಸಂಕಷ್ಠವುಂಟಾಗುತ್ತದೆ. ಇದನ್ನು ಮನಗಂಡು ಪ್ರತಿದಿನ ರೂ: 1,000 ದಂತೆ ಹಣ ನೀಡಲಾಗುತ್ತದೆ. ಈ ಸೌಲಭ್ಯವು ಸುಮಾರು 10 ರಿಂದ 15 ದಿನಗಳವರೆಗೆ ಲಭ್ಯವಿದ್ದು, ಕುಟುಂಬದ ದಿನನಿತ್ಯದ ಖರ್ಚುಗಳಿಗೆ ಸಹಾಯವಾಗುತ್ತದೆ.
🎓 ಮಕ್ಕಳ ಶಿಕ್ಷಣ ಭವಿಷ್ಯ ಸುರಕ್ಷಿತ
ಅಪಘಾತದಿಂದ ಪೋಷಕರು ಮೃತಪಟ್ಟರೆ ಮಕ್ಕಳ ಭವಿಷ್ಯ ಅಂಧಕಾರವಾಗುವ ಭೀತಿ ಇರುತ್ತದೆ. ಈ ಯೋಜನೆಯಲ್ಲಿ ಎರಡು ಮಕ್ಕಳಿಗೆ ರೂ: 1 ಲಕ್ಷವರೆಗೆ ಶಿಕ್ಷಣ ಸಹಾಯ ನೀಡಲಾಗುತ್ತದೆ. ಶಾಲೆ, ಕಾಲೇಜು ಹಾಗೂ ಅಗತ್ಯ ವಿದ್ಯಾಭ್ಯಾಸ ಮುಂದುವರಿಸಲು ಇದು ದೊಡ್ಡ ಸಹಾಯವಾಗುತ್ತದೆ.
⚰️ ಅಂತ್ಯಕ್ರಿಯೆ ಮತ್ತು ಪ್ರಯಾಣ ವೆಚ್ಚಕ್ಕೂ ನೆರವು
✔️ ಅಂತ್ಯಸಂಸ್ಕಾರಕ್ಕೆ ರೂ: 5,000 ರಿಂದ ರೂ: 9,000ವರೆಗೆ ಹಣ
✔️ ಅಪಘಾತ ಬೇರೆ ನಗರದಲ್ಲಿ ಸಂಭವಿಸಿದರೆ ಕುಟುಂಬದ ಪ್ರಯಾಣ ವೆಚ್ಚಕ್ಕೆ ರೂ: 25,000ವರೆಗೆ ಸಹಾಯ
ಇಂತಹ ಸಣ್ಣ ಮತ್ತು ಮುಖ್ಯ ವೆಚ್ಚಗಳನ್ನು ಈ ಯೋಜನೆಯು ಕವರ್ ಮಾಡುತ್ತದೆ.
📞 ಉಚಿತ ವೈದ್ಯರ ಸಲಹೆ ಸೌಲಭ್ಯ
ಈ ಯೋಜನೆಯಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಅನಿಯಮಿತ ಟೆಲಿ ಕಾನ್ಸಲ್ಟೇಶನ್ ಸೇವೆ ಲಭ್ಯವಿದೆ. ಮನೆಯಲ್ಲಿಯೇ ಕುಳಿತು ವೈದ್ಯರಿಂದ ಸಲಹೆ ಪಡೆಯಬಹುದು. ತುರ್ತು ಸಂದರ್ಭಗಳನ್ನು ಹೊರತು ಪಡಿಸಿ ಪದೇ ಪದೇ ಆಸ್ಪತ್ರೆಗೆ ಹೋಗುವ ಅನಿವಾರ್ಯವಿರುವುದಿಲ್ಲ.
📋 ಅರ್ಹತೆ ಮತ್ತು ಅಗತ್ಯ ದಾಖಲೆಗಳು
✅ ವಯಸ್ಸು 18 ರಿಂದ 65 ವರ್ಷಗಳವರೆಗೆ ಇರಬೇಕು
✅ India Post Payments Bank ( IPPB ) ಖಾತೆ ಕಡ್ಡಾಯವಾಗಿ ಇರಬೇಕು
ಖಾತೆ ಇಲ್ಲದಿದ್ದರೆ ಸುಮಾರು ರೂ: 200 ಕ್ಕೆ Premium Account ತೆಗೆಯಬಹುದು
✅ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ಬೇಕಾಗಿರುತ್ತದೆ
🔁 ಪ್ರತಿ ವರ್ಷ ವಿಮೆ ನವೀಕರಿಸುವುದು ಕಡ್ಡಾಯವಾಗಿದ್ದು, ತಪ್ಪದೆ ನವೀಕರಿಸಬೇಕಾಗುತ್ತದೆ ಇಲ್ಲದಿದ್ದಲ್ಲಿ ಈ ಯೋಜನೆಯ ಸೌಲಭ್ಯದೊರೆಯುವುದಿಲ್ಲ ನೆನಪಿನಲ್ಲಿಡಿ.
📝 ಅರ್ಜಿ ಹಾಕುವ ವಿಧಾನ
🏤 ಹತ್ತಿರದ ಅಂಚೆ ಕಚೇರಿಗೆ ಹೋಗಿ ನೇರವಾಗಿ ಅರ್ಜಿ ಹಾಕಬಹುದು
🚶 ನಿಮ್ಮ ಗ್ರಾಮದ ಪೋಸ್ಟ್ಮ್ಯಾನ್ ಗೆ ಮಾಹಿತಿ ನೀಡುವ ಮೂಲಕ ಮನೆಗೆ ಸೇವೆ ಪಡೆಯಬಹುದು
📱 ಈಗಾಗಲೇ IPPB ಖಾತೆಯಿದ್ದಲ್ಲಿ ಮೊಬೈಲ್ ಆಪ್ ಮೂಲಕ ಕೂಡ ಸುಲಭವಾಗಿ ರಿಜಿಸ್ಟರ್ ಮಾಡಬಹುದು
📢 ಪ್ರಮುಖವಾಗಿ ಗಮನಿಸಬೇಕಾದ ಅಂಶ
ಭಾರತೀಯ ಅಂಚೆ ಇಲಾಖೆಯು ಕೇವಲ ವಾರ್ಷಿಕ ರೂ: 799 ಕ್ಕೆ ರೂ: 15 ಲಕ್ಷದ ಭದ್ರತೆ ದೊರೆಯುವುದು ಇಂದಿನ ದಿನಗಳಲ್ಲಿ ಅಪರೂಪದ ಅವಕಾಶ ಆಗಿರುತ್ತದೆ. ದಿನಗೂಲಿ ಕಾರ್ಮಿಕರು, ರೈತರು, ಸಣ್ಣ ಉದ್ಯೋಗಿಗಳು ಹಾಗೂ ಮಧ್ಯಮ ವರ್ಗದವರು ಈ ಯೋಜನೆಯನ್ನು ತಪ್ಪದೇ ಪಡೆದುಕೊಳ್ಳಬೇಕು.
ಇದು ನಿಮ್ಮ ಜೀವನವನ್ನೇ ಬದಲಾಯಿಸಬಹುದು — ಒಂದು ಅಪಘಾತ ಬಂದಾಗ ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸುತ್ತದೆ.
ಆದುದರಿಂದ 👉 ಇಂದೇ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ ಮತ್ತು ಭದ್ರ ಭವಿಷ್ಯಕ್ಕೆ ಹೆಜ್ಜೆ ಇಡಿ.
ಇಂತಹ ಉಪಯುಕ್ತ ಮಾಹಿತಿಯನ್ನು ಮಿಸ್ ಮಾಡಿಕೊಳ್ಳಬೇಡಿ! Jobfykannada.in ನಮ್ಮ ಚಾನೆಲ್ ಫಾಲೋ ಮಾಡಿ ಮತ್ತು ಪ್ರತಿದಿನ ಹೊಸ ಅಪ್ಡೇಟ್ ಪಡೆಯಿರಿ, ಧನ್ಯವಾದಗಳು